ಸಂಸದ ಡಾ.ಉಮೇಶ್ ಜಾಧವ್‍ಗೆ ಎದೆ ನೋವು: ಆಸ್ಪತ್ರೆಗೆ ದಾಖಲು

Update: 2020-09-28 14:41 GMT

ಬೆಂಗಳೂರು, ಸೆ.28: ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್‍ ಅವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ನಗರದ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಇತ್ತೀಚೆಗೆ ಕೊರೋನದಿಂದ ಗುಣಮುಖರಾಗಿ ಬಂದಿದ್ದ ಸಂಸದ ಉಮೇಶ್ ಜಾಧವ್ ಅವರಿಗೆ, ಸಣ್ಣ ಪ್ರಮಾಣದ ಎದೆನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.

ಈ ಕುರಿತು ಟ್ವಿಟ್ ಮಾಡಿದ ಸಂಸದ ಜಾಧವ್, ಶೀಘ್ರವೇ ಗುಣಮುಖನಾಗಿ ಹಿಂದಿರುಗಲಿದ್ದೇನೆ ಎಂದು ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News