ವಿತ್ತೀಯ ನೀತಿ ಸಮಿತಿ ಸಭೆ ಮರು ನಿಗದಿಗೆ ಆರ್‌ಬಿಐ ನಿರ್ಧಾರ

Update: 2020-09-28 15:37 GMT

ಮುಂಬೈ, ಸೆ. 28 : ಈ ವಾರದ ವಿತ್ತೀಯ ನೀತಿ ಸಮಿತಿ (ಎಂಪಿಸಿ)ಯ ಸಭೆಯನ್ನು ಮರು ನಿಗದಿ ಮಾಡಲು ಆರ್‌ಬಿಐ ನಿರ್ಧರಿಸಿದೆ ಹಾಗೂ ಹೊಸ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಹೇಳಿದೆ.

ಸಭೆಯ ಮರು ನಿಗದಿ ಬಗ್ಗೆ ಆರ್‌ಬಿಐ ಯಾವುದೇ ಕಾರಣ ನೀಡಿಲ್ಲ. ಆರ್‌ಬಿಐಯ ದ್ವಿಮಾಸಿಕ ವಿತ್ತೀಯ ನೀತಿಯನ್ನು ಮರು ಪರಿಶೀಲಿಸಲು ಮಂಗಳವಾರದಿಂದ ಮೂರು ದಿನಗಳ ಕಾಲ ಸಭೆ ನಡೆಸಲು ನಿರ್ಧರಿಸಲಾಗಿತ್ತು. 2020 ಸೆಪ್ಟಂಬರ್ 29, 30 ಹಾಗೂ ಅಕ್ಟೋಬರ್ 1ರಂದು ನಡೆಯಲಿದೆ ಎಂದು ಘೋಷಿಸಲಾಗಿದ್ದ ವಿತ್ತೀಯ ನೀತಿ ಸಮಿತಿ ಸಭೆ ಮರು ನಿಗದಿಪಡಿಸಲಾಗುವುದು.

ವಿತ್ತೀಯ ನೀತಿ ಸಮಿತಿ ಸಭೆಯ ಹೊಸ ದಿನಾಂಕವನ್ನು ಶೀಘ್ರ ಪ್ರಕಟಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಸಮಿತಿಗೆ ನೂತನ ಬಾಹ್ಯ ಸದಸ್ಯರ ನೇಮಕದ ಕುರಿತ ಸರಕಾರದ ನಿರ್ಧಾರವನ್ನು ಆರ್‌ಬಿಐ ಕಾಯುತ್ತಿದೆ. ಆರ್‌ಬಿಐ ಕಾಯ್ದೆ ಪ್ರಕಾರ ವಿತ್ತೀಯ ನೀತಿ ಸಮಿತಿಯ ಬಾಹ್ಯ ಸದಸ್ಯನ ಅಧಿಕಾರಾವಧಿ 4 ವರ್ಷಗಳು. ಎಂಪಿಸಿ 2016 ಅಕ್ಟೋಬರ್‌ನಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News