ಮಾಸ್ಕ್ ಧರಿಸಿದ ಮುಖ ಗುರುತಿಸುವ ಸ್ವಯಂಚಾಲಿತ ವ್ಯವಸ್ಥೆ ರೂಪಿಸಲು ಎನ್‌ಸಿಆರ್‌ಬಿ ಒಲವು

Update: 2020-09-28 19:17 GMT

ಹೊಸದಿಲ್ಲಿ, ಸೆ. 28 :ಮಾಸ್ಕ್ ಮುಚ್ಚಿದ ಮುಖವನ್ನು ಪತ್ತೆ ಹಚ್ಚಲು ಮುಖ ಗುರುತಿಸುವ ಸ್ವಯಂಚಾಲಿತ ವ್ಯವಸ್ಥೆಯನ್ನು ಅಳವಡಿಸಲು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ (ಎನ್‌ಸಿಆರ್‌ಬಿ) ಒಲವು ವ್ಯಕ್ತಪಡಿಸಿದೆ.

 ರಾಷ್ಟ್ರೀಯ ಸ್ವಯಂಚಾಲಿತ ಮುಖ ಗುರುತಿಸುವ ವ್ಯವಸ್ಥೆ (ಎಎಫ್‌ಆರ್‌ಎಸ್) ರೂಪಿಸಲು ಆಶಕ್ತರಿಂದ ಟೆಂಡರ್ ಕರೆಯಲಾಗಿದೆ. ಈ ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 8. ಕೇಂದ್ರೀಕೃತ ಅರ್ಜಿಯ ಬಗ್ಗೆ ಈ ತಿಂಗಳ ಆರಂಭದಲ್ಲಿ ಸ್ಪಷ್ಟನೆ ನೀಡಿರುವ ಸಂಸ್ಥೆ, ಮಾಸ್ಕ್‌ನಿಂದ ಮುಚ್ಚಿದ ಮುಖವನ್ನು ಎಎಫ್‌ಆರ್‌ಎಸ್‌ನಿಂದ ಗುರುತಿಸಬಹುದು ಎಂದು ಎಂಬ ನಿರೀಕ್ಷೆ ಎನ್‌ಸಿಆರ್‌ಬಿ ಇದೆ ಎಂದಿದೆ. ವೌಲ್ಯಮಾಪನದಲ್ಲಿ ಮಾಸ್ಕ್ ಹಾಕಿದ ಮುಖಗಳ ಪರೀಕ್ಷೆಯ ಪ್ರಕರಣಗಳು ಕೂಡ ಒಳಗೊಳ್ಳಲಿವೆ. ಇಂತಹ ನಿಯಮಗಳಿಲ್ಲದೆ ಟೆಂಡರ್‌ದಾರರು ಪ್ರಸ್ತಾಪಿಸುವ ವ್ಯವಸ್ಥೆ ವೌಲ್ಯ ಮಾಪನದ ಸಂದರ್ಭ ಅಂಕ ಕಳೆದುಕೊಳ್ಳಲಿದೆ. ಎನ್‌ಸಿಆರ್‌ಬಿ ಬಿಡುಗಡೆ ಮಾಡಿದ 147 ಪುಟಗಳ ಪ್ರಸ್ತಾವ ಮನವಿ (ಆರ್‌ಎಫ್‌ಪಿ)ಗೆ ಪ್ರತಿಕ್ರಿಯಿಸುವ ಸಂದರ್ಭ ಆಸಕ್ತ ಟೆಂಡರ್‌ದಾರರೊಬ್ಬರು ಎತ್ತಿದ ಭಾಗಶಃ ಮುಖ ಹೋಲಿಕೆ ಕುರಿತ ಪ್ರಶ್ನೆಗೆ ಎನ್‌ಸಿಆರ್‌ಬಿ ಈ ಪ್ರತಿಕ್ರಿಯೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News