ಅವರು ರೈತರನ್ನು ಅವಮಾನಿಸುತ್ತಿದ್ದಾರೆ: ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದ ಘಟನೆ ಕುರಿತು ಪ್ರಧಾನಿ ಪ್ರತಿಕ್ರಿಯೆ

Update: 2020-09-29 11:50 GMT

ಹೊಸದಿಲ್ಲಿ : ಕೃಷಿ ಮಸೂದೆಗಳ ವಿರುದ್ಧ  ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ತಮ್ಮ ಆಕ್ಷೇಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ರೈತರು ಮುಕ್ತ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದಕ್ಕೆ  ಕೆಲ ಜನರು ವಿರೋಧ ಹೊಂದಿದ್ದಾರೆ ಹಾಗೂ ರೈತರು ಬಳಸುವ ಹಾಗೂ ಆರಾಧಿಸುವ ಸಲಕರಣೆಗಳಿಗೆ ಬೆಂಕಿ ಹಚ್ಚಿ ರೈತರನ್ನು ಅವಮಾನಿಸುತ್ತಿದ್ದಾರೆ ಎಂದಿದ್ದಾರೆ.

ದಿಲ್ಲಿಯ ರಾಜಪಥ್ ಸಮೀಪ ಸೋಮವಾರ ಪ್ರತಿಭಟನೆಯ ವೇಳೆ ಟ್ರ್ಯಾಕ್ಟರ್‍ಗೆ ಬೆಂಕಿ ಹಚ್ಚಿದ ಘಟನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಪ್ರಧಾನಿ ಮೇಲಿನ ಮಾತುಗಳನ್ನು ಹೇಳಿದ್ದಾರೆ.

ನಮಮಿ ಗಂಗೆ ಯೋಜನೆಯ ಅಂಗವಾಗಿ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಉತ್ತರಾಖಂಡದಲ್ಲಿ ಇಂದು ಆರು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಮಸೂದೆಗಳನ್ನು ವಿರೋಧಿಸುವವರಿಗೆ ರೈತರ ಸ್ವಾತಂತ್ರ್ಯದ ಬದಲು ಮಧ್ಯವರ್ತಿಗಳಿಗೆ ಲಾಭ ಗಳಿಸುವುದು ಬೇಕಿದೆ ಎಂದರು.

"ರೈತರು ಈಗ ತಮ್ಮ ಉತ್ಪನ್ನಗಳನ್ನು ಯಾರಿಗೆ ಬೇಕಾದರೂ ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ರೈತರಿಗೆ ಸರಕಾರ ಸ್ವಾತಂತ್ರ್ಯ ನೀಡುತ್ತಿರುವಾಗ ಈ ಜನ ಅದನ್ನು ವಿರೋಧಿಸುತ್ತಿದ್ದಾರೆ,'' ಎಂದರು.

ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ತೆಗೆದು ಹಾಕುವುದು ಎಂಬ ವದಂತಿಗಳು ಜನರನ್ನು ತಪ್ಪು ದಾರಿಗೆಳೆಯುತ್ತಿವೆ ಎಂದ ಪ್ರಧಾನಿ "ಅವರು ಎಂಎಸ್‍ಪಿ ಜಾರಿಗೊಳಿಸುವುದಾಗಿ ಹೇಳಿದರೂ ಹಾಗೆ ಮಾಡಿಲ್ಲ, ನಮ್ಮ ಸರಕಾರ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕ್ರಮ ಕೈಗೊಂಡಿದೆ,'' ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News