ಜಮ್ಮು-ಕಾಶ್ಮೀರ: ಇಬ್ಬರು ಲಷ್ಕರ್ ಉಗ್ರರ ಹತ್ಯೆ

Update: 2020-09-29 16:34 GMT

ಶ್ರೀನಗರ,ಸೆ.29: ದಕ್ಷಿಣ ಕಾಶ್ಮೀರದ ಅವಂತಿಪೋರಾದಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಲಷ್ಕರೆ ತೊಯ್ಬಾದ ಕಮಾಂಡರ್‌ ಸೇರಿದಂತೆ ಇಬ್ಬರು ಉಗ್ರರು ಕೊಲ್ಲಲ್ಪಟ್ಟಿದ್ದಾರೆ.

ಲಷ್ಕರ್‌ನ ಕಾರ್ಯಾಚರಣೆ ಕಮಾಂಡರ್ ಆಗಿದ್ದ ಇಜಾಝ್ ಅಹ್ಮದ್ ರೇಶಿ 2016ರಿಂದಲೂ ಸಕ್ರಿಯನಾಗಿದ್ದು, ಯುವಕರನ್ನು ಭಯೋತ್ಪಾದಕ ಸಂಘಟನೆಗೆ ಸೇರಿಸುತ್ತಿದ್ದ, ಜೊತೆಗೆ ಪ್ರದೇಶದಲ್ಲಿಯ ಸಕ್ರಿಯ ಭಯೋತ್ಪಾದಕರಿಗೆ ಆಶ್ರಯ ಮತ್ತು ಎಲ್ಲ ಬೆಂಬಲಗಳನ್ನು ಒದಗಿಸುತ್ತಿದ್ದ. ಭಯೋತ್ಪಾದಕ ದಾಳಿಗಳನ್ನು ನಡೆಸಲು ಭಯೋತ್ಪಾದಕರನ್ನು ಸಾಗಿಸುವಲ್ಲಿಯೂ ಭಾಗಿಯಾಗಿದ್ದ ಎಂದು ಡಿಜಿಪಿ ದಿಲ್‌ಬಾಗ್ ಸಿಂಗ್ ಅವರು ಮಂಗಳವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರದೇಶದಲ್ಲಿ ಉಗ್ರರ ಇರುವಿಕೆಯ ಬಗ್ಗೆ ಮಾಹಿತಿ ಪಡೆದಿದ್ದ ಜಂಟಿ ತಂಡವು ಶೋಧ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಅವರಿಗೆ ಶರಣಾಗಲು ಅವಕಾಶ ನೀಡಲಾಗಿತ್ತು. ಆದರೆ ಅವರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದ್ದು, ಇದು ಗುಂಡಿನ ಕಾಳಗಕ್ಕೆ ನಾಂದಿ ಹಾಡಿತ್ತು ಎಂದರು. ಹತ ಇನ್ನೋರ್ವ ಉಗ್ರನನ್ನು ಸಾಜದ್ ಅಹ್ಮದ್ ಸೋಫಿ ಎಂದು ಗುರುತಿಸಲಾಗಿದ್ದು, ಇಬ್ಬರೂ ಅವಂತಪೋರಾ ನಿವಾಸಿಗಳಾಗಿದ್ದರು ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News