ಎಲ್‌ಒಸಿಯಲ್ಲಿ ಪಾಕ್ ಶೆಲ್ ದಾಳಿಗೆ ಭಾರತದ ಮೂವರು ಸೈನಿಕರು ಹುತಾತ್ಮ

Update: 2020-10-01 09:20 GMT

ಶ್ರೀನಗರ,ಅ.1:ಜಮ್ಮು-ಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ(ಎಲ್‌ಒಸಿ)ಪಾಕಿಸ್ತಾನ ನಡೆಸಿದ ಭಾರೀ ಶೆಲ್ ದಾಳಿಯಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ಭಾರತೀಯ ಸೇನೆಯ ಮೂವರು ಸೈನಿಕರು ಹುತಾತ್ಮರಾಗಿದ್ದು, ಐವರು ಗಾಯಗೊಂಡಿದ್ದಾರೆ.

ಭಾರತೀಯ ಗುರಿಗಳನ್ನು ಗುರಿಯಾಗಿಸಲು ಮೊರ್ಟರ್ಸ್‌ಗಳನ್ನು ಬಳಸುತ್ತಿರುವ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಲಾಗುತ್ತಿದೆ ಎಂದು ಸೇನೆ ತಿಳಿಸಿದೆ.

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ನೌಗಮ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಸೇನೆಯ ಮೊರ್ಟರ್ ಮೂಲಕ ನಡೆಸಿದ ಗುಂಡಿನ ದಾಳಿಗೆ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ. ನಾಲ್ವರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಪಾಕಿಸ್ತಾನ ಸೇನೆಯು ಕದನ ವಿರಾಮವನ್ನು ಉಲ್ಲಂಘಿಸಿದ ಭಾರತದ ಸ್ಥಾನಗಳ ಮೇಲೆ ಭಾರೀ ಗುಂಡಿನ ದಾಳಿ ಆರಂಭಿಸಿದ ನಂತರ ಪೂಂಚ್ ಸೆಕ್ಟರ್‌ನಲ್ಲಿ ಸೈನಿಕರೊಬ್ಬರು ಸಾವನ್ನಪ್ಪಿದರು ಹಾಗೂ ಇನ್ನೊಬ್ಬರು ಗಾಯಗೊಂಡರು.

 ಕಳೆದ 8 ತಿಂಗಳುಗಳಲ್ಲಿ ಪಾಕಿಸ್ತಾನ 3,000ಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘಿಸಿರುವ ಕುರಿತು ವರದಿಯಾಗಿದೆೆ. ಕಳೆದ 17 ವರ್ಷಗಳಲ್ಲಿ ಇದು ಅಧಿಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News