ಮನೆಯಿಂದ ಹೊರ ಹೋಗುವ ಮುನ್ನ ಎಚ್ಚರ: ಮಾಸ್ಕ್ ಧರಿಸದಿದ್ದರೆ ಬೀಳಲಿದೆ ಭಾರೀ ದಂಡ

Update: 2020-10-02 11:37 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.2: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದಿದ್ದರೆ ದಂಡ ಹಾಕುವ ಪ್ರಮಾಣವನ್ನು 200 ರಿಂದ ಒಂದು ಸಾವಿರ ರೂಪಾಯಿಗೆ ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಬೇರೆ ಭಾಗದಲ್ಲಿ 500 ರೂಪಾಯಿ ದಂಡ ಇರಲಿದೆ. ದಂಡ ಏರಿಕೆಯ ಆದೇಶದ ಬಗ್ಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿ, ಇಂದಿನಿಂದಲೇ 1 ಸಾವಿರ ರೂ. ದಂಡ ಕಾರ್ಯಾಚರಣೆ ಶುರುವಾಗುತ್ತದೆ ಎಂದರು.

ನಗರದ ಪೊಲೀಸ್‍ರಿಗೆ 100ಕ್ಕೂ ಹೆಚ್ಚು ಡಿವೈಸ್ ನೀಡಲಾಗಿದೆ. 250 ಡಿವೈಸ್‍ಗಳು ಬಿಬಿಎಂಪಿ ಮಾರ್ಷಲ್‍ಗಳ ಬಳಿ ಇದೆ. ಇನ್ನು ಸ್ವಲ್ಪ ಹೊತ್ತಿನಲ್ಲೇ ಮಾಸ್ಕ್ ಹಾಕದೇ ಇರುವವರ ಮೇಲೆ ದಂಡ ಹಾಕಲು ನೀಡಿರುವ ಡಿವೈಸ್‍ಗಳನ್ನು ಅಪ್‍ಡೇಟ್ ಮಾಡಲಾಗುತ್ತೆ. ಅಪ್‍ಡೇಟ್ ಆದ ತಕ್ಷಣ, ಮನೆಯಿಂದ ಹೊರಗೆ ಮಾಸ್ಕ್ ಹಾಕದವರಿಗೆ 1 ಸಾವಿರ ರೂ. ದಂಡ ಹಾಕಲಾಗುತ್ತದೆ ಎಂದರು.

ಮಾರ್ಷಲ್ಸ್ ಗಸ್ತು ಪಡೆ ವಾಹನಗಳಿಗೆ ಚಾಲನೆ: ನೂತನ ಎಂಟು ಮಾರ್ಷಲ್ಸ್ ಗಸ್ತುಪಡೆ ವಾಹನಗಳಿಗೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಚಾಲನೆ ನೀಡಿದ್ದಾರೆ. ಸಿಕ್ಕ-ಸಿಕ್ಕಲ್ಲಿ ಕಟ್ಟಡ ನಿರ್ಮಾಣದ ಕಸ ಸುರಿದರೆ, ರಸ್ತೆಯಲ್ಲೇ ಮರಳು, ಜಲ್ಲಿ ಹಾಕಿ ರೋಡ್ ಬ್ಲಾಕ್ ಮಾಡುವವರಿಗೆ ಸರಿಯಾದ ದಂಡ ಹಾಕಲಿದೆ. ಗಾಂಧಿ ಜಯಂತಿಯಂದು ಬಿಬಿಎಂಪಿಯ 8 ಮಾರ್ಷಲ್ಸ್ ಮೊಬೈಲ್ ಸ್ಕ್ವಾಡ್ ರಸ್ತೆಗಿಳಿದಿವೆ. ನಗರದಲ್ಲಿ ಕಾರ್ಯಾಚರಣೆ ನಡೆಸಲು ನಿವೃತ್ತ ಯೋಧರು, ಎನ್‍ಸಿಸಿ ಸರ್ಟಿಫಿಕೆಟ್ ಹೊಂದಿದ 55 ಜನರ ಮಾರ್ಷಲ್ಸ್ ಗಳ ತಂಡ ಸಜ್ಜಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News