ಬೆಂಗಳೂರು ವಿವಿ: ಕರ್ನಾಟಕ ಬಂದ್‍ನಿಂದ ಮುಂದೂಡಲಾಗಿದ್ದ ಪರೀಕ್ಷೆಗಳು ಅ.10, 12ಕ್ಕೆ ನಿಗದಿ

Update: 2020-10-07 13:27 GMT

ಬೆಂಗಳೂರು, ಅ.7: ಕರ್ನಾಟಕ ಬಂದ್‍ನಿಂದಾಗಿ ಮುಂದೂಡಲಾಗಿದ್ದ ಸೆ.25 ಹಾಗೂ ಸೆ.28ರಂದು ನಡೆಯಬೇಕಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ 2ನೇ ಹಾಗೂ 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಅ.10 ಹಾಗೂ 12ರಂದು ನಡೆಸಲಾಗುತ್ತಿದೆ ಎಂದು ಬೆಂಗಳೂರು ವಿವಿ ಕುಲಸಚಿವರು ತಿಳಿಸಿದ್ದಾರೆ.

ಅ.10ರಂದು 2ನೇ ಸೆಮಿಸ್ಟರ್ ನ ಬಿಎ, ಬಿಎಸ್‍ಡಬ್ಲ್ಯೂ, ಬಿಎಸ್ಸಿ, ಬಿಎಸ್ಸಿ(ಎಫ್‍ಎಡಿ), ಬಿಎಸ್ಸಿ(ಐಡಿಡಿ), ಬಿಕಾಂ, ಬಿಕಾಂ(ಹಾನರ್ಸ್), ಬಿಬಿಎಂ, ಬಿಬಿಎ, ಬಿಬಿಎ(ಏವಿಯೇಷನ್ ಮ್ಯಾನೇಜ್‍ಮೆಂಟ್), ಬಿಎ ಮತ್ತು ಬಿಎಸ್ಸಿ(ಹೋಂ ಸೈನ್ಸ್), ಬಿಎ, ಬಿಎಸ್ಸಿ ಮತ್ತು ಬಿಕಾಂ(ವೊಕೇಷನಲ್), ಬಿಎಚ್‍ಎಂ ಪರೀಕ್ಷೆಗಳು ನಡೆಯಲಿವೆ. ಹಾಗೂ 6ನೇ ಸೆಮಿಸ್ಟರ್ ನಲ್ಲಿ ಬಿಎ, ಬಿಎಸ್‍ಡಬ್ಲ್ಯೂ, ಬಿಎಸ್ಸಿ, ಬಿಎಸ್ಸಿ(ಎಫ್‍ಎಡಿ), ಬಿಎಸ್ಸಿ(ಐಡಿಡಿ). ಬಿಬಿಎ, ಬಿಎ ಮತ್ತು ಬಿಎಸ್ಸಿ(ಹೋಂ ಸೈನ್ಸ್) ಬಿಕಾಂ ವೊಕೇಷನಲ್), ಬಿಎಚ್‍ಎಂ ವಿಷಯಗಳ ಪರೀಕ್ಷೆಗಳು ಇರಲಿವೆ.

ಅ.12ರಂದು 2ನೇ ಸೆಮಿಸ್ಟರ್ ನಲ್ಲಿ ಬಿಎ, ಬಿಎಸ್‍ಡಬ್ಲ್ಯೂ, ಬಿಎಸ್ಸಿ, ಬಿಎಸ್ಸಿ,(ಎಫ್‍ಎಡಿ), ಬಿಎಸ್ಸಿ(ಐಡಿಡಿ). ಬಿಕಾಂ(ಹಾನರ್ಸ್)ಬಿಎ, ಬಿಎಸ್ಸಿ ಮತ್ತು ಬಿಕಾಂ ವೊಕೇಷನಲ್ ಪರೀಕ್ಷೆಗಳು ನಡೆಯಲಿವೆ. ಹಾಗೂ 6ನೇ ಸೆಮಿಸ್ಟರ್ ನಲ್ಲಿ ಬಿಎ, ಬಿಎಸ್‍ಡಬ್ಲೂ, ಬಿಎಸ್ಸಿ, ಬಿಎಸ್ಸಿ(ಎಫ್‍ಎಡಿ), ಬಿಎಸ್ಸಿ(ಐಡಿಡಿ), ಬಿಕಾಂ, ಬಿಎ, ಬಿಎಸ್ಸಿ ಮತ್ತು ಬಿಕಾಂ ವೊಲೇಷನಲ್, ಬಿಎ ಮತ್ತು ಬಿಎಸ್ಸಿ ಹೋಂ ಸೈನ್ಸ್ ವಿಷಯಗಳ ಪರೀಕ್ಷೆಗಳು ನಡೆಯಲಿವೆ ಎಂದು ಬೆಂವಿವಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News