ಕೊರೋನ ಅಪ್‌ಡೇಟ್: ತಿಂಗಳ ಬಳಿಕ ಒಂಭತ್ತು ಲಕ್ಷಕ್ಕಿಂತ ಕೆಳಗಿಳಿದ ಸಕ್ರಿಯ ಪ್ರಕರಣ

Update: 2020-10-10 03:45 GMT

ಹೊಸದಿಲ್ಲಿ, ಅ.10: ದೇಶದಲ್ಲಿ ಕೊರೋನ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಶುಕ್ರವಾರ ಒಂದು ತಿಂಗಳ ಬಳಿಕ ಮೊದಲ ಬಾರಿಗೆ ಒಂಭತ್ತು ಲಕ್ಷದಿಂದ ಕೆಳಗಿಳಿದಿದೆ. ಇದು ದೇಶದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಸ್ಪಷ್ಟ ಸೂಚನೆಯಾಗಿದೆ. ಆದರೆ ಕೆಲ ರಾಜ್ಯಗಳಲ್ಲಿ ಪ್ರಕರಣಗಳ ಏರಿಕೆ ಪ್ರಮಾಣ ಅಧಿಕ ಇರುವುದು ಕಳವಳಕ್ಕೆ ಕಾರಣವಾಗಿದೆ.

ಪ್ರತಿದಿನ ವರದಿಯಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆಗಿಂತ ಅಧಿಕ ಮಂದಿ ಪ್ರತಿದಿನ ಗುಣಮುಖರಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ಸುಸ್ಥಿರವಾಗಿ ಇಳಿಕೆ ಪ್ರವೃತ್ತಿ ತೋರಿದೆ. ಗುರುವಾರ ದೇಶದಲ್ಲಿ 70,496 ಹೊಸ ಪ್ರಕರಣಗಳು ಸೇರ್ಪಡೆಯಾಗಿದ್ದು, 78,365 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದೀಗ ದೇಶದಲ್ಲಿ ಒಟ್ಟು 8.93 ಲಕ್ಷ ಸಕ್ರಿಯ ಪ್ರಕರಣಗಳಿವೆ.

ಕಳೆದ ಮೂರು ವಾರಗಳಿಂದೀಚೆಗೆ ಪ್ರತಿದಿನ ಗುಣಮುಖರಾಗುತ್ತಿರುವವರ ಸರಾಸರಿ ಸಂಖ್ಯೆ, ಹೊಸ ಪ್ರಕರಣಗಳ ಸಾಪ್ತಾಹಿಕ ಸರಾಸರಿಗಿಂತ ಅಧಿಕ ಇದೆ. ಸರಾಸರಿ ಹೊಸ ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಘುತ್ತಿದೆ. ಅಕ್ಟೋಬರ್ 2-8ರ ಅವಧಿಯಲ್ಲಿ ಹೊಸ ಪ್ರಕರಣಗಳ ಸಮಖ್ಯೆ 5.23 ಇದ್ದು, ಸೆಪ್ಟೆಂಬರ್ 18-24ರ ಅವಧಿಯಲ್ಲಿ ಇದು 6.14 ಲಕ್ಷ ಆಗಿತ್ತು.

ಗುರುವಾರ ದೇಶದಲ್ಲಿ ಪ್ರಕರಣಗಳ ಪ್ರಗತಿ ದರ ಶೇಕಡ 6.53 ದಾಖಲಾಗಿದೆ. ಆದರೆ ಗೋವಾದಲ್ಲಿ ಗರಿಷ್ಠ ಅಂದರೆ ಶೇಕಡ 30.20 ರ ಪ್ರಮಾಣದಲ್ಲಿ ಬೆಳೆಯುತ್ತಿದೆ. ದೇಶದಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 69,06,151 ಆಗಿದ್ದು, ಇದುವರೆಗೆ 1,06,490 ಮಂದಿ ಬಲಿಯಾಗಿದ್ದಾರೆ. ಗುರುವಾರ ಒಟ್ಟು 964 ಮಂದಿ ಜೀವ ಕಳೆದುಕೊಂಡಿದ್ದಾರೆ. ಗೋವಾ, ಮಹಾರಾಷ್ಟ್ರ, ಚಂಡೀಗಢ, ನಾಗಾಲ್ಯಾಂಡ್ ಮತ್ತು ಕೇರಳದಲ್ಲಿ ಪ್ರಕರಣಗಳ ಪ್ರಗತಿದರ ಅತ್ಯಧಿಕ ಪ್ರಮಾಣದಲ್ಲಿ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News