ತಂದೆಯ ಚಿತೆಗೆ ಬೆಂಕಿಯಿಟ್ಟು ಕುಸಿದು ಬಿದ್ದ ಚಿರಾಗ್ ಪಾಸ್ವಾನ್

Update: 2020-10-10 16:58 GMT

ಪಾಟ್ನಾ: ಗುರುವಾರ ನಿಧನರಾದ ಎಲ್ ಜೆ ಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರ ಚಿತೆಗೆ ಬೆಂಕಿಯಿಟ್ಟ ಪುತ್ರ ಚಿರಾಗ್ ಪಾಸ್ವಾನ್ ಕುಸಿದು ಬಿದ್ದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಂದೆಯ ಮರಣದಿಂದ ತೀವ್ರ ದುಃಖಿತರಾಗಿದ್ದ ಚಿರಾಗ್ ಆಘಾತದಿಂದ ಕುಸಿದು ಬಿದ್ದಿದ್ದಾರೆ. ಗಂಗಾನದಿಯ ತಟದಲ್ಲಿ ಚಿತೆಗೆ ಬೆಂಕಿ ಇಟ್ಟ ನಂತರ ಚಿರಾಗ್ ಕುಸಿದರು. ಕೂಡಲೇ ಹತ್ತಿರದಲ್ಲಿದ್ದವರು ಧಾವಿಸಿ ಬಂದು ಅವರನ್ನು ಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News