ಅಮೆರಿಕ: ಕೊರೋನ ಸೋಂಕು ಸಂಖ್ಯೆಯಲ್ಲಿ ದಾಖಲೆಯ ಏರಿಕೆ

Update: 2020-10-10 18:16 GMT

ವಾಶಿಂಗ್ಟನ್, ಅ. 10: ಅಮೆರಿಕದಲ್ಲಿ ಶುಕ್ರವಾರ 58,000ಕ್ಕೂ ಅಧಿಕ ನೂತನ ಕೊರೋನ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ. ಇದು ಎರಡು ತಿಂಗಳ ದಾಖಲೆಯಾಗಿದೆ.

ದೇಶದ 50 ರಾಜ್ಯಗಳ ಪೈಕಿ 10ರಲ್ಲಿ ಒಂದು ದಿನದ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.

ಸಾಂಕ್ರಾಮಿಕದಿಂದಾಗಿ ಅಮೆರಿಕದಲ್ಲಿ ಈವರೆಗೆ 2,13,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಹಲವು ರಾಜ್ಯಗಳ ಆಸ್ಪತ್ರೆಗಳು ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ನಿಭಾಯಿಸಲು ಪರದಾಡುತ್ತಿವೆ. ದೇಶಾದ್ಯಂತ ಈಗ 34,000ಕ್ಕೂ ಅಧಿಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News