ಜನಸಂದಣಿ ಪ್ರದೇಶದಲ್ಲಿ ಕೊರೋನ ಪರೀಕ್ಷೆಗೆ ಬಿಬಿಎಂಪಿ ನಿರ್ಧಾರ

Update: 2020-10-12 16:55 GMT

ಬೆಂಗಳೂರು, ಅ.12: ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜನಸಂದಣಿ ಜಾಸ್ತಿ ಇರುವ ಕಡೆ ಕೊರೋನ ಪರೀಕ್ಷೆ ನಡೆಸಲು ಬಿಬಿಎಂಪಿ ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ನಗರದ ಮಾಲ್, ಸೂಪರ್ ಮಾರ್ಕೆಟ್, ಪಾರ್ಕ್‍ಗಳಲ್ಲಿ ಕೊರೋನ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಅಲ್ಲದೇ ಕಬ್ಬನ್ ಪಾರ್ಕ್ ಮತ್ತು ಲಾಲ್‍ಬಾಗ್ ಗೇಟ್ ಬಳಿ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. ಪ್ರಾಥಮಿಕ, ದ್ವಿತೀಯ ಸಂಪರ್ಕ ಹಾಗೂ ಅನ್ಯ ರೋಗಗಳಿಗೆ ತುತ್ತಾದವರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತದೆ. ನೂರಾರು ಸಂಖ್ಯೆಯ ಜನ ಓಡಾಡುವ ಕಡೆಯೂ ಪರೀಕ್ಷೆ ಮಾಡಲಾಗುತ್ತದೆ ಎಂದರು.

ಮಾಲ್‍ಗಳಲ್ಲಿ ನಿಯಮ ಉಲ್ಲಂಘಿಸಿರುವುದು ಗಮನಕ್ಕೆ ಬಂದಿದೆ. ಸೂಪರ್ ಮಾರ್ಕೆಟ್, ಮಾಲ್‍ನಲ್ಲಿ ನಿಯಮ ಉಲ್ಲಂಘನೆಯಾದರೆ ಮಾಲೀಕರೇ ಹೊಣೆಯಾಗುತ್ತಾರೆ. ಹೀಗಾಗಿ ಮಾಲ್ ಮಾಲಕರು, ಶಾಪ್‍ನ ಮಾಲಕರು ಕೊರೋನ ನಿಯಮ ಪಾಲಿಸಬೇಕು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News