ನ.9ಕ್ಕೆ 11 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ

Update: 2020-10-13 08:41 GMT

ಹೊಸದಿಲ್ಲಿ: ಉತ್ತರಪ್ರದೇಶದ 10 ಹಾಗೂ ಉತ್ತರಾಖಂಡದ ಒಂದು ಸಹಿತ 11 ರಾಜ್ಯಸಭಾ ಸ್ಥಾನಗಳಿಗೆ ನವೆಂಬರ್ 9ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಸಮಿತಿಯು ಮಂಗಳವಾರ ತಿಳಿಸಿದೆ.

ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಹಾಗೂ ಕಾಂಗ್ರೆಸ್‌ನ ರಾಜ್ ಬಬ್ಬರ್ ಸಹಿತ 11 ರಾಜ್ಯಸಭಾ ಸದಸ್ಯರುಗಳ ಅವಧಿಯು ನವೆಂಬರ್‌ನಲ್ಲಿ ಕೊನೆಯಾಗಲಿದೆ.

 ಕೊರೋನ ವೈರಸ್‌ನ್ನು ನಿಯಂತ್ರಿಸುವುದನ್ನು ಖಚಿತಪಡಿಸಲು ಮಾಸ್ಕ್ ಗಳು, ಥರ್ಮಲ್ ಸ್ಕಾನಿಂಗ್ ಹಾಗೂ ಸ್ಯಾನಿಟೈಸರ್‌ಗಳ ಬಳಕೆಯು ಅತ್ಯಂತ ಮುಖ್ಯವಾಗಿದೆ.ಸುರಕ್ಷಿತ ಅಂತರಕ್ಕೆ ಸಂಬಂಧಿಸಿ ಸರಕಾರದ ಕಡ್ಡಾಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಚುನಾವಣಾ ಆಯೋಗ ಪ್ರಕಟನೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News