ಜೀವನ ಸಾಗಿಸಲು ಅಕ್ಕಿ ಬಿಯರ್ ಮಾರುತ್ತಿರುವ ರಾಷ್ಟ್ರೀಯ ಕರಾಟೆ ಪದಕ ವಿಜೇತೆ!

Update: 2020-10-18 18:50 GMT

 ರಾಂಚಿ (ಜಾರ್ಖಂಡ್), ಅ. 18: ಬಡತನದ ಕಾರಣಕ್ಕೆ ರಾಷ್ಟ್ರೀಯ ಕರಾಟೆ ಪದಕ ವಿಜೇತೆ ರಾಂಚಿಯ ಬಿಮ್ಲಾ ಮುಂಡಾ ಅವರು ಅಕ್ಕಿ ಬಿಯರ್ (ರೈಸ್ ಬಿಯರ್) ಮಾರಾಟ ಮಾಡುತ್ತಿರುವುದು ವರದಿಯಾಗಿದೆ.

 26 ವರ್ಷದ ಬಿಮ್ಲಾ ಅವರು ಜಾರ್ಖಂಡ್ ರಾಜ್ಯವನ್ನು ಪ್ರತಿನಿಧಿಸಿ ಹಲವು ಪದಕಗಳು ಹಾಗೂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಜಾರ್ಖಂಡ್‌ನಲ್ಲಿ 2011ರಲ್ಲಿ ನಡೆದ 34ನೇ ನ್ಯಾಶನಲ್ ಗೇಮ್‌ನಲ್ಲಿ ಬೆಳ್ಳಿಯ ಪದಕ ಗಳಿಸಿದ್ದಾರೆ. ಅಲ್ಲದೆ, ಜಾರ್ಖಂಡ್‌ನಿಂದ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಜೀವನ ಸಾಗಿಸಲು ಅವರು ಈ ವರ್ಷ ಫೆಬ್ರವರಿಯಲ್ಲಿ ಕರಾಟೆ ತರಬೇತಿ ಕೇಂದ್ರ ಆರಂಭಿಸಿದ್ದರು. ಆದರೆ, ಕೊರೋನ ಸಾಂಕ್ರಾಮಿಕ ಹರಡುತ್ತಿರುವ ಹಿನ್ನೆಲೆಯಲ್ಲಿ ಘೋಷಿಸಲಾಗಿದ್ದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅದನ್ನು ಮುಚ್ಚಿದ್ದರು.

 ವಾಣಿಜ್ಯ ಪದವೀಧರೆಯಾಗಿರುವ ಬಿಮ್ಲಾ ಪ್ರಸ್ತುತ ತನ್ನ 84 ವರ್ಷದ ಅಜ್ಜಿಯೊಂದಿಗೆ ರಾಂಚಿಯ ಕಂಕೆ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದಾರೆ. ಅವರ ಪೋಷಕರು ಸಗ್ರಾಮ್‌ಪುರದಲ್ಲಿದ್ದಾರೆ. ಸಣ್ಣ ಕೃಷಿಕರಾಗಿರುವ ಅವರ ತಂದೆ ಬಿಮ್ಲಾ ಹಾಗೂ ಇತರ ಐದು ಮಕ್ಕಳನ್ನು ಫೋಷಿಸಲು ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಮ್ಲಾ ತನ್ನ ಬದುಕಿನ ಹೋರಾಟವನ್ನು ಹಂಚಿಕೊಂಡಿದ್ದಾರೆ. ‘‘ಲಾಕ್‌ಡೌನ್ ಹಿನ್ನೆಲೆಯಲ್ಲಿ ಕರಾಟೆ ತರಬೇತಿ ಕೇಂದ್ರವನ್ನು ಮಚ್ಚಬೇಕಾಯಿತು. ಆದುದರಿಂದ ಈ ಅಕ್ಕಿ ಬಿಯರ್ ಮಾರಾಟ ಮಾಡಲು ತೊಡಗಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News