ಕನ್ನಡದಲ್ಲಿ ಹ್ಯಾಂಡಿ ಕ್ರಾಫ್ಟ್ ಕೋರ್ಸ್ ಆರಂಭ

Update: 2020-10-18 18:58 GMT

ಬೆಂಗಳೂರು, ಅ. 18: ಕುಶಲಕರ್ಮಿಗಳಾಗಬೇಕು ಹಾಗೂ ಅದೇ ಕ್ಷೇತ್ರದಲ್ಲಿ ಸ್ವಂತ ಉದ್ಯಮವನ್ನು ಕಟ್ಟಿಕೊಂಡು ಬದುಕಬೇಕು ಎನ್ನುವರಿಗಾಗಿ ಇಂಡಿಯನ್ ಮನಿ ಡಾಟ್ ಕಾಂ ನಿಂದ ಫೈನಾನ್ಸಿಯಲ್ ಫ್ರೀಡಂ ಆಪ್ ಮೂಲಕ ಕನ್ನಡದಲ್ಲಿ ರೂಪಿಸಲಾಗಿರುವ ಹ್ಯಾಂಡಿ ಕ್ರಾಫ್ಟ್ಸ್ ಕೋರ್ಸನ್ನು ಆರಂಭಿಸಲಾಗಿದೆ.

ನಗರದ ಶಾಂತಿನಗರದ ಇಂಡಿಯನ್ ಮನಿ ಡಾಟ್ ಕಾಂ ಕೇಂದ್ರ ಕಚೇರಿಯಲ್ಲಿ ರವಿವಾರ ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಕೋರ್ಸ್ ಅನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಕೋವಿಡ್‍ನಿಂದಾಗಿ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದೆ. ಈಗ ಉದ್ಯೋಗದ ಹುಡುಕಾಟ ಮಾಡುವ ಬದಲು ಉದ್ಯಮಿಗಳಾಗುವ ಬಗ್ಗೆ ಯೋಚಿಸಬೇಕಿದೆ ಎಂದು ಹೇಳಿದರು.

ಉದ್ಯಮಿಗಳ ಸಂಖ್ಯೆ ಅಧಿಕವಾಗುತ್ತಿರುವಾಗ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವ ಜತೆಗೆ ಉದ್ಯೋಗ ಸೃಷ್ಟಿಯಾಗಿ ಆರ್ಥಿಕತೆ ಸರಿದಾರಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್‍ನಲ್ಲಿ ಕುಶಲಕರ್ಮಿಗಳಾಗಲು ಬಯಸುವವರಿಗೆ ಪ್ರತ್ಯೇಕವಾಗಿ ಕನ್ನಡದಲ್ಲಿ ಹ್ಯಾಂಡ ಕ್ರಾಫ್ಟ್ ಕೋರ್ಸ್ ಅನ್ನು ವಿನ್ಯಾಸಗೊಳಿಸಿರುವುದು ಅರ್ಥಪೂರ್ಣವಾಗಿದೆ ಎಂದು ನುಡಿದರು.

ಕೋರ್ಸ್‍ನಲ್ಲಿ ಹಂತ ಹಂತವಾಗಿ ಎಲ್ಲವನ್ನೂ ವಿವರಿಸಲಾಗಿದೆ. ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳವರೆಗೂ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಜನರೂ ಈ ಕೋರ್ಸ್‍ನಿಂದ ಅನುಕೂಲ ಪಡೆಯಬಹುದಾಗಿದೆ. ಉತ್ಸಾಹಿ ಯುವಕರು ಈ ರೀತಿಯ ಕಲಿಕಾ ಆಪ್‍ಗಳ ಸಹಾಯದಿಂದ ಹೊಸ ಉದ್ಯಮಗಳನ್ನು ಸ್ಥಾಪಿಸಲು ಜ್ಞಾನ ಸಂಪಾದಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News