ಕೋವಿಡ್ ಚಿಕಿತ್ಸೆಗೆ ದಾರಿಯಾಗಬಲ್ಲ ಸಂಶೋಧನೆ: 14 ವರ್ಷದ ಅನಿಕಾಗೆ 25 ಸಾವಿರ ಡಾಲರ್ ಬಹುಮಾನ

Update: 2020-10-19 07:53 GMT

ನ್ಯೂಯಾರ್ಕ್:ಕೊರೋನ ವೈರಸ್‌ಗೆ ಚಿಕಿತ್ಸೆ ಕಂಡುಹಿಡಿಯಲು ವಿಶ್ವದಾದ್ಯಂತವಿರುವ ವಿಜ್ಞಾನಿಗಳು ಸ್ಪರ್ಧೆಯಲ್ಲಿರುವಾಗ 14 ವರ್ಷದ ಬಾಲಕಿ ಅಮೋಘ ಸಾಧನೆ ಮಾಡಿದ್ದಾರೆ.
ಟೆಕ್ಸಾಸ್‌ನ ಫ್ರಿಸ್ಕೋ ಮೂಲದ ಅನಿಕಾ ಚೆಬ್ರೊಲು ಕೋವಿಡ್‌ಗೆ ಸಂಭಾವ್ಯ ಚಿಕಿತ್ಸೆಗೆ ದಾರಿಯಾಗಬಲ್ಲ ಸಂಶೋಧನೆ ಗಾಗಿ 2020ರ 3 ಎಂ ಯಂಗ್ ಸೈಂಟಿಸ್ಟ್ ಚಾಲೆಂಜ್ ಹಾಗೂ 25,000 ಡಾಲರ್ ಬಹುಮಾನವನ್ನು ಗೆದ್ದುಕೊಂಡಿದ್ದಾರೆ.
"ಕಳೆದ ಎರಡು ದಿನಗಳಿಂದ ನನ್ನಯೋಜನೆಯ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಗಳು ಬರುತ್ತಿರುವುದನ್ನು ನಾನು ನೋಡಿದ್ದೇನೆ. ಏಕೆಂದರೆ ಅದು ಸಾರ್ಸ್ -ಕೋವಿಡ್-2 ವೈರಸ್ ಅನ್ನು ಒಳಗೊಂಡಿರುತ್ತದೆ ಹಾಗೂ ಈ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ನಮ್ಮ ಸಾಮೂಹಿಕ ಭರವಸೆಯನ್ನು ಇದು ಪ್ರತಿಬಿಂಬಿಸುತ್ತದೆ. ನಾನು ಎಲ್ಲರಂತೆ ಆದಷ್ಟು ಬೇಗನೆ ನಮ್ಮ ಸಾಮಾನ್ಯ ಜೀವನಕ್ಕೆ ಮರಳಲು ಬಯಸುತ್ತೇನೆ''ಎಂದು ಅನಿಕಾ ಸಿಎನ್‌ಎನ್‌ಗೆ ತಿಳಿಸಿದ್ದಾರೆ.

ಇಂಡಿಯನ್ ಅಮೆರಿಕನ್ ಆಗಿರುವ ಅನಿಕಾ ಅವರು 8ನೇ ತರಗತಿಯಲ್ಲಿದ್ದಾಗ ತಮ್ಮ ಪ್ರಾಜೆಕ್ಟ್ ಸಲ್ಲಿಸಿದ್ದರು. ಆದರೆ ಅವರ ಯೋಜನೆ ಮೇಲೆ ಯಾವುದೇ ಗಮನ ಹರಿಯುವ ಸಾಧ್ಯತೆಯಿಲ್ಲ. 1918ರ ಫ್ಲೂ ಸಾಂಕ್ರಾಮಿಕ ರೋಗದ ಬಗ್ಗೆ ತಿಳಿದುಕೊಂಡ ನಂತರ ವೈರಸ್‌ಗಳಿಗೆ ಚಿಕಿತ್ಸೆಯನ್ನು ಕಂಡುಕೊಳ್ಳಲು ಅನಿಕಾ ಆಸಕ್ತಿ ತಾಳಿದರು. ಜನರಿಗೆ ವರ್ಷಂಪ್ರತಿ ಲಸಿಕೆ ಕಾರ್ಯಕ್ರಮ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಷ್ಟೆಲ್ಲ್ಲಾ ಔಷಧಿಗಳ ಹೊರತಾಗಿಯೂ ಅಮೆರಿಕದಲ್ಲಿ ಪ್ರತಿವರ್ಷ ಎಷ್ಟು ಮಂದಿ ಸಾಯುತ್ತಿದ್ದಾರೆಂಬ ಕುರಿತು ಅಧ್ಯಯನ ನಡೆಸಲು ಆಸಕ್ತಿ ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News