ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಪಂಜಾಬ್ ಸಿಎಂ

Update: 2020-10-20 06:22 GMT

 ಚಂಡಿಗಡ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಮಂಗಳವಾರ ಕೇಂದ್ರ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ವಿಧಾನಸಭೆಯಲ್ಲಿ ನಿರ್ಣಯವೊಂದನ್ನು ಮಂಡಿಸಿದರು.

ಹೊಸ ಕೃಷಿ ಕಾನೂನುಗಳಿಗೆ ಸಂಬಂಧಿಸಿ ನಡೆಯುತ್ತಿರುವ ವಿಶೇಷ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಸದನದ ನಾಯಕ ನಿರ್ಣಯ ಮಂಡಿಸಿದರು.

ಕೇಂದ್ರದ ಕೃಷಿ ಕಾನೂನು ಗಳನ್ನುಎದುರಿಸಲು  ಮೂರು ಮಸೂದೆ ಗಳನ್ನು ಮುಖ್ಯಮಂತ್ರಿ ಅಮರಿಂದರ್ ಪರಿಚಯಿಸಿದರು.

"ಕೃಷಿ ರಾಜ್ಯದ ವಿಚಾರವಾಗಿದ್ದು, ಕೇಂದ್ರ ಸರಕಾರ ಇದನ್ನು ನಿರ್ಲಕ್ಷಿಸುತ್ತಿದೆ. ಭಾರತ ಸರಕಾರ ಮಾಡಲು ಹೊರಟಿರುವ ಕೆಲಸವು ನನಗೆ ವಿಚಿತ್ರವಾಗಿ ಕಾಣುತ್ತಿದೆ''ಎಂದು ಸದನವನ್ನುದ್ದೇಶಿಸಿ ಮಾತನಾಡುತ್ತಾ ಸಿಂಗ್ ಹೇಳಿದರು.

ಕೇಂದ್ರ ಜಾರಿಗೆ ತಂದಿರುವ ವಿವಾದಾತ್ಮಕ ಮಸೂದೆಗಳಿಗೆ ಪಂಜಾಬ್ ಹಾಗೂ ಹರ್ಯಾಣದಲ್ಲಿನ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News