ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ: ಮೆಟ್ರೋ ಸಂಚಾರ ಸಮಯ ಬದಲಾವಣೆ

Update: 2020-10-20 11:00 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.20: ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ ನಮ್ಮ ಮೆಟ್ರೋ ತನ್ನ ಸಮಯವನ್ನು ಮತ್ತಷ್ಟು ಬದಲಾಯಿಸಿಕೊಂಡಿದೆ. 

ಆರಂಭದಲ್ಲಿ ದಿನವೊಂದಕ್ಕೆ ಕನಿಷ್ಠ 4 ಸಾವಿರ ಪ್ರಯಾಣಿಕರು ಓಡಾಡುತ್ತಿದ್ದರು. ಈಗ 55 ಸಾವಿರಕ್ಕೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಅನುಕೂಲತೆಗಾಗಿ ತನ್ನ ಸೇವಾ ಅವಧಿಯನ್ನು ಹೆಚ್ಚಿಸಿಕೊಂಡಿದೆ.

ಸುರಕ್ಷಿತ ಅಂತರ ಮಾನದಂಡಗಳ ಪಾಲನೆಯ ನಂತರವೂ ರೈಲಿನಲ್ಲಿ ಜನದಟ್ಟಣೆಯ ಸಮಯದಲ್ಲಿ ಕೂಡ ಸಾಕಷ್ಟು ಸ್ಥಳಾವಕಾಶ ಇದೆ. ಹೀಗಾಗಿ ನಮ್ಮ ಮೆಟ್ರೋ ಕಾರ್ಯಾಚರಣೆಯಲ್ಲಿ ಅ.22 ರಿಂದ ವಾರದ ವಿವಿಧ ದಿನಗಳಲ್ಲಿ ಮೆಟ್ರೋ ಸೇವೆಗಳು ಲಭ್ಯವಿರಲಿದೆ.

ಮೆಟ್ರೋ ವೇಳಾಪಟ್ಟಿ: ಸೋಮವಾರದಿಂದ ಶುಕ್ರವಾರದವರೆಗೆ (2ನೇ, 4ನೇ ಶನಿವಾರಗಳನ್ನು ಹೊರತುಪಡಿಸಿ), ಪ್ರತಿ 5 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 9ರಿಂದ 10 ಗಂಟೆಯವರೆಗೆ ಮತ್ತು ಸಂಜೆ 5.30 ರಿಂದ 6.30 ಗಂಟೆಯವರೆಗೆ. 6 ನಿಮಿಷಗಳ ಅಂತರದಲ್ಲಿ ಬೆಳಗ್ಗೆ 8ರಿಂದ 9 ಗಂಟೆಯವರೆಗೆ ಮತ್ತು ಬೆಳಗ್ಗೆ 10ರಿಂದ 11ಗಂಟೆಯವರೆಗೆ.

6 ನಿಮಿಷಗಳ ಅಂತರದಲ್ಲಿ ಸಂಜೆ 4.30 ರಿಂದ 5.30 ಗಂಟೆಯವರೆಗೆ ಮತ್ತು ಸಂಜೆ 6.30 ರಿಂದ ರಾತ್ರಿ 8.00 ಗಂಟೆಯವರೆಗೆ. ಉಳಿದ ಸಮಯದಲ್ಲಿ 12 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸುತ್ತವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News