ದಾರುಲ್ ಮುಸ್ತಫಾ ಬೆಂಗಳೂರು ಜಿಲ್ಲಾ ಘಟಕ ಅಸ್ತಿತ್ವಕ್ಕೆ

Update: 2020-10-20 14:14 GMT

ಬೆಂಗಳೂರು: ದಾರುಲ್ ಮುಸ್ತಫಾ ಮೋರಲ್ ಅಖಾಡಮಿ ನಚ್ಚಬೆಟ್ಟು ಇದರ ಅಧೀನದಲ್ಲಿ ಬೆಂಗಳೂರು ಜಿಲ್ಲೆಯನ್ನು ಪ್ರತಿನಿಧಿಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. 

ಇಲ್ಲಿನ ಶಿವಾಜಿ ನಗರದಲ್ಲಿ ದಾರುಲ್ ಮುಸ್ತಫಾ ಮೋರಲ್ ಅಖಾಡಮಿ ಸ್ಥಾಪಕ ಟಿ.ಎಂ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅನಸ್ ಸಿದ್ದೀಖಿ ಸಖಾಫಿ ಶಿರಿಯ ಉಧ್ಘಾಟಿಸಿದರು. ಬಳಿಕ ದಾರುಲ್ ಮುಸ್ತಫಾ ಮೋರಲ್ ಅಖಾಡಮಿ ಬೆಂಗಳೂರು ಜಿಲ್ಲಾ ಘಟಕವನ್ನು ರೂಪುಗೊಳಿಸಲಾಯಿತು.

ಅಧ್ಯಕ್ಷರಾಗಿ ಹಮೀದ್ ಎಲೆಕ್ಟ್ರಾನಿಕ್ ಸಿಟಿ,ಉಪಾಧ್ಯಕ್ಷರಾಗಿ ಸ್ವಾಲಿಹ್ ಕಣ್ಣೂರು, ಸ್ವಾಲಿಹ್ ಸುಳ್ಯ ಆಯ್ಕೆಯಾದರು. ಪ್ರ.ಕಾರ್ಯದರ್ಶಿಯಾಗಿಇಲ್ಯಾಸ್ ಬಾರಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ಮನ್ಸೂರ್ ಬೆಂಗಳೂರು, ಅನ್ಸಾರ್ ತೆಕ್ಕಾರ್, ಕೋಶಾಧಿಕಾರಿಯಾಗಿ ಮುಸ್ತಫಾ ಉಪ್ಪಿನಂಗಡಿ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ದಾರುಲ್ ಮುಸ್ತಫಾ ಮೋರಲ್ ಅಖಾಡಮಿ ನಚ್ಚಬೆಟ್ಟು ಇದರ ಸಾರಥಿಗಳಾದ ಬಶೀರ್ ಅಹ್ಸನಿ ತೋಡಾರ್, ಯೂನೂಸ್ ಇಮ್ದಾದಿ, ಮುನೀರ್ ಸಖಾಫಿ ಸಾಲೆತ್ತೂರು, ಹಸನ್ ಝುಹ್ರಿ, ಮಹ್ ರೂಫ್ ಆತೂರು, ಉಸ್ಮಾನ್ ಮುಸ್ಲಿಯಾರ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News