ಬಸ್ ಟಿಕೆಟ್ ಮೂಲಕ ಕೆಎಸ್ಆರ್‌ಟಿಸಿಯಿಂದ ಕೊರೋನ ಜಾಗೃತಿ

Update: 2020-10-21 11:58 GMT

ಬೆಂಗಳೂರು, ಅ.21: ಕೊರೋನ ಸೋಂಕು ನಿಯಂತ್ರಣ ಕುರಿತು ಪ್ರಯಾಣಿಕರಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವ ಕೆಎಸ್ಆರ್‌ಟಿಸಿ, ಈ ಬಾರಿ ಬಸ್ ಟೆಕೆಟ್ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ.

ಕೊರೋನ ಕುರಿತು ಅರಿವು ಮೂಡಿಸಲು ಬಸ್ ಟಿಕೆಟ್‍ಗಳಲ್ಲಿ ಕೋವಿಡ್ ಜಾಗೃತಿ ಸಂದೇಶವನ್ನು ಮುದ್ರಿಸುತ್ತಿದೆ. ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲಿಸಿ, ಕೈಗಳ ಸ್ವಚ್ಛತೆ ಕಾಪಾಡುವಂತೆ ಬಸ್ ಟಿಕೆಟ್‍ನಲ್ಲಿ ಮುದ್ರಿಸಲಾಗಿದೆ.

ಜೊತೆಗೆ ಆರಂಭಿಕ ಕೋವಿಡ್-19 ಪರೀಕ್ಷೆಯು ಜೀವ ಉಳಿಸುತ್ತದೆ ಎಂದು ಕೊರೋನ ಪರೀಕ್ಷೆ ಮಾಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News