ಹಬ್ಬಗಳ ಪ್ರಯುಕ್ತ ಕೆಎಸ್‍ಟಿಡಿಸಿಯಿಂದ ಪ್ರವಾಸಿಗರಿಗೆ ಶೇ.30ರಷ್ಟು ರಿಯಾಯಿತಿ

Update: 2020-10-21 13:58 GMT

ಬೆಂಗಳೂರು, ಅ. 21: 2020ನೆ ಸಾಲಿನ ದಸರಾ ಮಹೋತ್ಸವ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಶೇ.30ರ ವರೆಗೂ ರಿಯಾಯಿತಿ ನೀಡಿ ವ್ಯವಸ್ಥಿತ ಪ್ರವಾಸಗಳನ್ನು ಆಯೋಜಿಸಲು ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕ್ರಮಕೈಗೊಂಡಿರುತ್ತದೆ.

ಈ ರಿಯಾಯಿತಿ ದರಗಳು ನ.30ರ ವರೆಗಿನ ಪ್ರವಾಸಗಳಿಗೆ ಮಾತ್ರ ಅನ್ವಯಿಸುತ್ತದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರಿಗೆ ರಾಜ್ಯ ಹಾಗೂ ಅಂತರರಾಜ್ಯದ ವಿವಿಧ ಪ್ರವಾಸಿ ತಾಣಗಳಿಗೆ ವ್ಯವಸ್ಥಿತ ಪ್ರವಾಸಗಳನ್ನು ಆಯೋಜಿಸುತ್ತಾ ಬಂದಿರುತ್ತದೆ. ಕೋವಿಡ್ ಹೊಡೆತದಿಂದ ನಲುಗಿದ ಪ್ರವಾಸಿಗರನ್ನು ಮರಳಿ ಪ್ರವಾಸೋದ್ಯಮದತ್ತ ಆಕರ್ಷಿಸಲು ಹಾಗೂ ಪ್ರವಾಸಿಗರಿಗೆ ಕೈಗೆಟಕುವ ದರಗಳಲ್ಲಿ ಪ್ರವಾಸಿ ತಾಣಗಳನ್ನು ಭೇಟಿ ಮಾಡಲು ಅನುಕೂಲ ಕಲ್ಪಿಸಿದೆ.

ನಿಗಮವು ಪ್ರಸ್ತುತ ಇರುವ ಕೋವಿಡ್-19ನ ಎಲ್ಲ ಸುರಕ್ಷಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿರುತ್ತದೆ. ಪ್ರವಾಸಗಳ ವಾಹನಗಳನ್ನು ಪ್ರತಿದಿನ ಸ್ಯಾನಿಟೈಸ್ ಮಾಡಲಾಗುವುದು, ಪ್ರವಾಸಕ್ಕೆ ನಿಯೋಜಿಸುವ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಪ್ರತಿದಿನ ಥರ್ಮಲ್ ಸ್ಕ್ರೀನಿಂಗ್, ಮಾಸ್ಕ್, ಸ್ಯಾನಿಟೈಸರ್ ಬಳಸಲು ಸೂಚಿಸಲಾಗಿದೆ ಹಾಗೂ ಪ್ರವಾಸಗಳ ಸಂದರ್ಭದಲ್ಲಿ ಪ್ರವಾಸಿಗರು ಅಂತರ ಕಾಪಾಡುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ಪ್ರವಾಸಗಳನ್ನು ಎ.ಸಿ/ನಾನ್ ಎ.ಸಿ ಡಿಲಕ್ಸ್ ವಾಹನ ಸೌಲಭ್ಯದೊಂದಿಗೆ ಆಯೋಜಿಸುತ್ತಿದ್ದು, ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ನಿಗಮದ ಬುಕ್ಕಿಂಗ್ ಕೌಂಟರ್‍ಗಳು, ಕೆಎಸ್ಸಾರ್ಟಿಸಿ ಅವತಾರ್ ಪೆÇೀರ್ಟಲ್ ಹಾಗೂ ರೆಡ್‍ಬಸ್ ಪೆÇೀರ್ಟಲ್ ಮುಖಾಂತರ ಮಾಡಲಾಗುತ್ತಿದೆ. ಪ್ರವಾಸದ ಬುಕ್ಕಿಂಗ್‍ಗಾಗಿ ಯಶವಂತಪುರದಲ್ಲಿರುವ ಪ್ರಧಾನ ಬುಕ್ಕಿಂಗ್ ಕೇಂದ್ರವನ್ನು ಹಾಗೂ ಕೆಂಪೇಗೌಡ ಬಸ್ ನಿಲ್ದಾಣದಲ್ಲಿನ ನಿಗಮದ ಕೌಂಟರ್‍ನ್ನು ಸಂಪರ್ಕಿಸಬಹುದಾಗಿದೆ.

ಅಲ್ಲದೆ, ನಿಗಮದ ಅಧಿಕೃತ ಟ್ರಾವೆಲ್ ಏಜೆಂಟ್ ಮುಖಾಂತರ ಬುಕ್ಕಿಂಗ್ ಮಾಡಬಹುದಾಗಿದೆ. ಆನ್‍ಲೈನ್ ಬುಕ್ಕಿಂಗ್ ದೂ. ಸಂಖ್ಯೆ: 080-4334 4334/35, ಮೊಬೈಲ್-91 89706 50070/ 89706 50075.  ಹೆಚ್ಚಿನ ಮಾಹಿತಿಗಾಗಿ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News