ಆರ್.ಆರ್ ನಗರದಲ್ಲಿ ಗೆಲುವು ನನ್ನದೇ: ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ವಿಶ್ವಾಸ

Update: 2020-10-21 15:34 GMT

ಬೆಂಗಳೂರು, ಅ.21: ನಾನು ಈ ಕ್ಷೇತ್ರದ ಮಗ ನಿಮ್ಮೆಲ್ಲರ ಕಷ್ಟ ಸುಖಗಳನ್ನು ನೋಡಿಕೊಂಡೇ ಬೆಳೆದವನು. ಜೆಡಿಎಸ್ ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ. ಈ ಚುನಾವಣೆಯಲ್ಲಿ ನಾವೇ ಗೆಲ್ಲುವುದು ಎಂದು ರಾಜರಾಜೇಶ್ವರಿ ನಗರ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ವಿ. ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.

ಆರ್.ಆರ್ ನಗರ ವ್ಯಾಪ್ತಿಯ ಸಜ್ಜೆಪಾಳ್ಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಯಾವುದಕ್ಕೂ ಹೆದರಬೇಕಿಲ್ಲ, ನಾನು ಎಂದೆಂದಿಗೂ ನಿಮ್ಮ ಜೊತೆ ಇರುತ್ತೇನೆ. ಬಿಜೆಪಿ-ಕಾಂಗ್ರೆಸ್‍ನವರು ಎಷ್ಟೇ ಜನರನ್ನು ಜೆಡಿಎಸ್‍ನಿಂದ ಸೇರಿಸಿಕೊಂಡರು ನಮ್ಮ ಮೇಲೆ ಯಾವ ಪರಿಣಾಮ ಬೀರಲ್ಲ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದರು.

ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಮಾತನಾಡಿ, ಮೂರು ಪಕ್ಷಗಳಿಗೂ ರಾಜರಾಜೇಶ್ವರಿ ನಗರ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಆರ್‍ಆರ್ ನಗರ ಗೆಲ್ಲಲು ಜೆಡಿಎಸ್ ಕೂಡ ರಣತಂತ್ರ ರೂಪಿಸಿದೆ. ಒಟ್ಟು 50 ತಂಡಗಳನ್ನು ರಚಿಸಿರುವ ಜೆಡಿಎಸ್ ಪ್ರತಿ ತಂಡಕ್ಕೆ 10 ರಿಂದ 15 ಬೂತ್‍ಗಳ ಉಸ್ತುವಾರಿ ನೀಡಿದೆ. ಜೊತೆಗೆ 10 ಶಾಸಕರಿಗೆ ವಾರ್ಡ್‍ವಾರು ಉಸ್ತುವಾರಿ ನೀಡಲಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News