ಟ್ರಂಪ್‌ಗೆ ಸೋಲು: ಇದುವರೆಗೆ ಈ ಪ್ರೊಫೆಸರ್ ಭವಿಷ್ಯ ಸುಳ್ಳಾಗಿಲ್ಲ!

Update: 2020-10-23 03:51 GMT

ವಾಷಿಂಗ್ಟನ್, ಅ.23: ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಗ್ಗೆ 1984ರಿಂದಲೂ ನಿಖರವಾಗಿ ಅಂದಾಜಿಸುತ್ತಾ ಬಂದ ಪ್ರೊಫೆಸರ್ ಅಲನ್ ಲಿಚ್‌ಮನ್, ಈ ಬಾರಿಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸೋಲಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಟ್ರಂಪ್ ಈ ಮೂಲಕ ಜಾರ್ಜ್ ಎಚ್.ಡಬ್ಯ್ಲು ಬುಷ್ ಬಳಿಕ ಮರು ಆಯ್ಕೆಯಾಗದ ಎರಡನೇ ಅಧ್ಯಕ್ಷ ಎನಿಸಿಕೊಳ್ಳಲಿದ್ದಾರೆ. 1992ರ ಅಧ್ಯಕ್ಷೀಯ ಚುನಾವಣೆಯಲ್ಲಿ ಬುಷ್ ಸೋಲು ಅನುಭವಿಸುವ ಮೂಲಕ ಅವರ ಎರಡನೇ ಅವಧಿಯ ಕನಸು ನುಚ್ಚುನೂರಾಗಿತ್ತು. ಆ ಬಳಿಕ ಯಾವ ಅಧ್ಯಕ್ಷರೂ ಮರು ಆಯ್ಕೆಯಾಗಲು ವಿಫಲರಾದ ನಿದರ್ಶನ ಇಲ್ಲ.

ಲಿಚ್‌ಮನ್ ಅವರು ಅಮೆರಿಕ ವಿವಿಯ ಅಮೆರಿಕನ್ ಇತಿಹಾಸ ವಿಭಾಗದ ಪ್ರೊಫೆಸರ್.

ಬುಷ್ ಪ್ರಕರಣ ಹೊರತುಪಡಿಸಿದರೆ ಅಮೆರಿಕದ ಇತಿಹಾಸದಲ್ಲೇ ಅಧ್ಯಕ್ಷರು ಎರಡನೇ ಬಾರಿಗೆ ಆಯ್ಕೆಯಾಗದ ನಿದರ್ಶನ ಇಲ್ಲ. ಡೆಮಾಕ್ರಟಿಕ್ ಪಕ್ಷವನ್ನು ಯುವಜನತೆ ಹೆಚ್ಚಾಗಿ ಬೆಂಬಲಿಸುತ್ತಿರುವುದು ಟ್ರಂಪ್ ಸೋಲಿಗೆ ಕಾರಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News