ದೇಶದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾದವರು 1.17 ಲಕ್ಷ

Update: 2020-10-24 03:43 GMT

ಚೆನ್ನೈ : ದೇಶದಲ್ಲಿ ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 69 ಲಕ್ಷದ ಗಡಿದಾಟಿದೆ. ಈ ಮಧ್ಯೆ ಶುಕ್ರವಾರ ದೇಶದಲ್ಲಿ 690 ಮಂದಿ ಸೋಂಕಿತರು ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 1,17,306 ಆಗಿದೆ.

ಸತತ ಐದನೇ ದಿನ ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 60 ಸಾವಿರಕ್ಕಿಂತ ಕಡಿಮೆ ಇದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 77,61,312 ಎಂದು ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ಕರ್ನಾಟಕ, ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಢ, ಗೋವಾ, ಆಂಧ್ರಪ್ರದೇಶ, ಚಂಡೀಗಢ, ಪಶ್ಚಿಮ ಬಂಗಾಳ ಹಾಗೂ ದೆಹಲಿ ಸೇರಿ 15 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕರಣಗಳ ಹೆಚ್ಚಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು ಇದೆ.

ಈ ಮಧ್ಯೆ ತಮಿಳನಾಡಿನ ಮಧುರೈ ಸಂಸದ ಸು.ವೆಂಕಟೇಸನ್ ಅವರಿಗೆ ಕೊರೋನ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3057 ಹೊಸ ಪ್ರಕರಣಗಳು ವರದಿಯಾಗಿದ್ದು, 33 ಮಂದಿ ಮೃತಪಟ್ಟಿದ್ದಾರೆ.

ದಸರಾ ಹಬ್ಬದ ಸಲುವಾಗಿ ಮನೆಗಳಿಗೆ ಹೋಗಲು ಬಸ್ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಗಿ ಸಾಮಾಜಿಕ ಅಂತರ ನಿಯಮಾವಳಿ ಸಾರಾಸಗಟಾಗಿ ಉಲ್ಲಂಘನೆಯಾದ ಪ್ರಕರಣ ಹೈದರಾಬಾದ್‌ನಿಂದ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News