ಬೆಂಗಳೂರು : ಪ್ರವಾಹದಲ್ಲಿ ಸಿಲುಕಿದ್ದ ಹಸುಗೂಸು‌ ರಕ್ಷಣೆ

Update: 2020-10-24 09:19 GMT

ಬೆಂಗಳೂರು : ಶುಕ್ರವಾರ ಸಂಜೆ ಹೊಸಕೆರೆಹಳ್ಳಿಯಲ್ಲಿ ಮನೆಯೊಳಗೆ ನೀರು ನುಗ್ಗಿದ್ದರಿಂದ ಬಾಣಂತಿ ಮತ್ತು 15 ದಿನದ ಮಗು ಕೂಡ ಮಳೆ ನೀರಿನಲ್ಲಿ ಸಿಲುಕಿದ್ದರು. ಮನೆಯೊಳಗೆ ನೀರು ನುಗ್ಗಿದ್ದರಿಂದ ಹೊರಗೆ ಬರಲಾರದಂತಾಗಿತ್ತು. ಈ ವೇಳೆ ಅವರ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಬಾಣಂತಿ ಮತ್ತು ಮಗುವನ್ನು ರಕ್ಷಿಸಿದ್ದಾರೆ. ಯುವಕನೊಬ್ಬ 15 ದಿನದ ಮಗುವನ್ನು ಕೈಯಲ್ಲಿ ಎತ್ತಿ ಹಿಡಿದು ಪ್ರವಾಹದ ನೀರನ್ನು ದಾಟಿ, ಮಗುವನ್ನು ರಕ್ಷಿಸಿರುವ ವೀಡಿಯೊ ವೈರಲ್ ಆಗಿದೆ.

ಮಳೆಯಿಂದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ ಮತ್ತು ಹಸುಗೂಸನ್ನು ಎದುರಿನ ಮನೆಯ 2ನೇ ಮಹಡಿಗೆ ಶಿಫ್ಟ್​ ಮಾಡಲಾಯಿತು. ಆ ವೀಡಿಯೊ ವೈರಲ್ ಆಗಿದ್ದು, ಬಾಹುಬಲಿ ಸಿನಿಮಾದಲ್ಲಿ ನದಿಯಲ್ಲಿ ಮಗುವನ್ನು ಎತ್ತಿಹಿಡಿದಿದ್ದ ರೀತಿಯಲ್ಲೇ ಹೊಸಕೆರೆಹಳ್ಳಿಯಲ್ಲೂ ಮಗುವನ್ನು ರಕ್ಷಿಸಲಾಗಿದೆ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

ದತ್ತಾತ್ರೇಯ ನಗರದಲ್ಲಿ ಸುಮಾರು ಮೂನ್ನೂರಕ್ಕೂ ಹೆಚ್ಚು ಮನೆಗಳು ಹಾನಿಯಾಗಿವೆ. ಒಂದು ವಠಾರದ ಐವತ್ತಕ್ಕೂ ಹೆಚ್ಚು ಮನೆ ಸಂಪೂರ್ಣ ಕೆಸರುಮಯವಾಗಿದೆ. ಹದಿನೈದು ದಿನದ ಬಾಣಂತಿಯನ್ನ ಪವಾಡದ ರೀತಿಯಲ್ಲಿ ಬಚಾವ್ ಮಾಡಿದ್ದ ಸ್ಥಳೀಯರು ಮಗುವನ್ನು ಎತ್ತಿ ಹಿಡಿದು ರಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News