ರಕ್ಷಣಾ ಇಲಾಖೆಯ ಸಿಎಸ್‌ಡಿ ಮಳಿಗೆಗಳಲ್ಲಿ ವಿದೇಶಿ ಉತ್ಪನ್ನಗಳ ಮಾರಾಟಕ್ಕೆ ನಿಷೇಧ

Update: 2020-10-24 17:11 GMT

ಹೊಸದಿಲ್ಲಿ,ಸೆ.24: ‘ಆತ್ಮನಿರ್ಭರ ಭಾರತ’ ಯೋಜನೆಯಡಿ ಸ್ವದೇಶಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ಪ್ರಯತ್ನಗಳ ಭಾಗವಾಗಿ ರಕ್ಷಣಾ ಸಚಿವಾಲಯವು ತನ್ನ ಕ್ಯಾಂಟೀನ್ ಅಂಗಡಿ ಮಳಿಗೆಗಳಲ್ಲಿ ಚೀನಾ ಸೇರಿದಂತೆ ವಿದೇಶಗಳಿಂದ ಆಮದು ಮಾಡಲಾದ ವಸ್ತುಗಳ ಮಾರಾಟವನ್ನು ನಿಷೇಧಿಸಿದೆ.

 ‘‘ಕ್ಯಾಂಟೀನ್ ಅಂಗಡಿಗಳ ಮಳಿಗೆ (ಸಿಎಸ್‌ಡಿ) ಹಾಗೂ ಅದರಡಿಯಲ್ಲಿ ನಡೆಯುವ ಕ್ಯಾಂಟೀನ್‌ಗಳ ಘಟಕಗಳಲ್ಲಿ ಹಲವಾರು ಬಗೆಯ ಆಮದು ವಸ್ತುಗಳ ಮಾರಾಟ ವನ್ನು ನಿಲ್ಲಿಸಲಾಗುವುದು’’ ಎಂದು ರಕ್ಷಣಾ ಮೂಲಗಳು ಶನಿವಾರ ತಿಳಿಸಿವೆ.

ಉತ್ತರದ ಸಿಯಾಚಿನ್ ಗ್ಲೇಸಿಯರ್‌ನಿಂದ ಹಿಡಿದು ದಕ್ಷಿಣದ ಆಂಡಮಾನ್ ನಿಕೋಬಾರ್ ದ್ವೀಪಸ್ತೋಮದವರೆಗೆ ಸಿಎಸ್‌ಡಿಯ 3500ಕ್ಕೂ ಅಧಿಕ ಕ್ಯಾಂಟೀನ್ ಅಂಗಡಿಗಳನ್ನು ನಡೆಸುತ್ತಿದೆ.

 ಸಿಎಸ್‌ಡಿ ಮಳಿಗೆಗಳಲ್ಲಿರುವ ಆಮದು ಸಾಮಾಗ್ರಿಗಳನ್ನು ನಿಷೇಧಿಸಿ, ಅವುಗಳ ಜಾಗದಲ್ಲಿ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಆಮದಿತ ವಿದೇಶಿ ಮದ್ಯಗಳ ಮಾರಾಟ ಕೂಡಾ ಸ್ಥಗಿತಗೊಳಿಸುವ ಸಾಧ್ಯತೆಯಿದೆಯೆನ್ನಲಾಗಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸಿಎಸ್‌ಡಿ ನಡೆಸುವ ಬಹುತೇಕ ಕ್ಯಾಂಟೀನ್‌ಗಳಲ್ಲಿ ದುಬಾರಿ ಬೆಲೆಯ ವಿದೇಶಿ ಬ್ರ್ಯಾಂಡ್‌ನ ಮದ್ಯಗಳು ಲಭ್ಯವಾಗುತ್ತಿಲ್ಲವೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News