ಕೊರೋನ ವೈರಸ್‌ನಿಂದಾಗಿ ಜಗತ್ತು ಸಂಧಿಕಾಲದಲ್ಲಿದೆ: ವಿಶ್ವ ಆರೊಗ್ಯ ಸಂಸ್ಥೆ ಮಹಾನಿರ್ದೇಶಕ

Update: 2020-10-24 18:02 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಅ. 24: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಜಗತ್ತು ಈಗ ಮಹತ್ವದ ಸಂಧಿಕಾಲದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಶುಕ್ರವಾರ ಹೇಳಿದ್ದಾರೆ. ಅದೂ ಅಲ್ಲದೆ, ಕೆಲವು ದೇಶಗಳು ಅಪಾಯಕಾರಿ ದಾರಿಯಲ್ಲಿ ಸಾಗುತ್ತಿದ್ದು, ಸಾಂಕ್ರಾಮಿಕದ ಒತ್ತಡಕ್ಕೆ ಅವುಗಳ ಆರೋಗ್ಯ ಸೇವೆಗಳು ಕುಸಿದು ಬೀಳುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

‘‘ಕೋವಿಡ್-19 ಸಾಂಕ್ರಾಮಿಕದ ವಿಷಯದಲ್ಲಿ, ಅದರಲ್ಲೂ ಮುಖ್ಯವಾಗಿ ಉತ್ತರ ಗೋಳಾರ್ಧದಲ್ಲಿ ನಾವೀಗ ಮಹತ್ವದ ಸಂಧಿಕಾಲದಲ್ಲಿದ್ದೇವೆ’’ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದರು.

‘‘ಮುಂದಿನ ಕೆಲವು ತಿಂಗಳುಗಳು ಅತ್ಯಂತ ಕಠಿಣವಾಗಿರಲಿವೆ ಹಾಗೂ ಕೆಲವು ದೇಶಗಳು ಅಪಾಯಕಾರಿ ದಾರಿಯಲ್ಲಿ ಸಾಗುತ್ತಿವೆ’’ ಎಂದರು.

‘‘ಇನ್ನಷ್ಟು ಅನಗತ್ಯ ಸಾವುಗಳು ಸಂಭವಿಸುವುದನ್ನು, ಅಗತ್ಯ ಆರೋಗ್ಯ ಸೇವೆಗಳು ಕುಸಿಯುವುದನ್ನು ಹಾಗೂ ಶಾಲೆಗಳು ಮತ್ತೆ ಮುಚ್ಚುವುದನ್ನು ತಡೆಯಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾವು ಜಗತ್ತಿನ ನಾಯಕರನ್ನು ಒತ್ತಾಯಿಸುತ್ತೇವೆ. ನಾನು ಫೆಬ್ರವರಿಯಲ್ಲಿ ಏನು ಹೇಳಿದ್ದೇನೆಯೋ, ಅದನ್ನೇ ಈಗ ಪುನರುಚ್ಚರಿಸುತ್ತಿದ್ದೇನೆ: ಇದು ಅಣಕು ಕಾರ್ಯಾಚರಣೆಯಲ್ಲ’’ ಎಂದು ಟೆಡ್ರಾಸ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News