ದೇಶದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ ಇಳಿಕೆ

Update: 2020-10-31 03:39 GMT

ಹೊಸದಿಲ್ಲಿ : ದೇಶದಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾಗುತ್ತಿರುವವರ ಸಂಖ್ಯೆ, ದೇಶದಲ್ಲಿ ಸೋಂಕು ಉತ್ತುಂಗದಲ್ಲಿದ್ದ ಸೆಪ್ಟೆಂಬರ್ ಮಧ್ಯದ ವೇಳೆಗೆ ಹೋಲಿಸಿದರೆ ಅರ್ಧಕ್ಕೆ ಇಳಿದಿದೆ.

ದೇಶದಲ್ಲಿ ಹೊಸ ಪ್ರಕರಣಗಳ ಸಾಪ್ತಾಹಿಕ ಸರಾಸರಿ 47,216ಕ್ಕೆ ಇಳಿದಿದೆ. ದೇಶದಲ್ಲಿ ಸೋಂಕು ಉತ್ತುಂಗಕ್ಕೇರಿದ್ದ ಅವಧಿಯಲ್ಲಿ ಅಂದರೆ ಸೆಪ್ಟೆಂಬರ್ 17ರಂದು ಸರಾಸರಿ ಪ್ರಕರಣಗಳ ಸಂಖ್ಯೆ 93,735ಕ್ಕೇರಿತ್ತು. ಇದೀಗ ಆ ಸಂಖ್ಯೆಗೆ ಹೋಲಿಸಿದರೆ ಸರಾಸರಿ ಹೊಸ ಪ್ರಕರಣಗಳ ಸಂಖ್ಯೆ ಶೇಕಡ 50ರಷ್ಟು ಕಡಿಮೆಯಾದಂತಾಗಿದೆ.

ಅಂತೆಯೇ ಏಳು ದಿನಗಳಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಕೂಡಾ ಗಣನೀಯವಾಗಿ ಕಡಿಮೆಯಾಗಿದೆ. ಸೆಪ್ಟೆಂಬರ್ 19ರಂದು ದೇಶದಲ್ಲಿ ಅತ್ಯಧಿಕ ಅಂದರೆ 1176 ಸೋಂಕಿತರು ಮೃತಪಟ್ಟಿದ್ದರೆ, ಅಕ್ಟೋಬರ್ 29ರಂದು ಇದು ಶೇಕಡ 50ರಷ್ಟು ಕಡಿಮೆಯಾಗಿ 543ಕ್ಕೆ ಇಳಿದಿದೆ ಎನ್ನುವುದು ರಾಜ್ಯ ಸರ್ಕಾರಗಳ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ದೇಶದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಮತ್ತು ಸೋಂಕಿತರ ಸಾವಿನ ಪ್ರಮಾಣ ಎರಡೂ ಇದೀಗ ಜುಲೈ ತಿಂಗಳ ಮಟ್ಟಕ್ಕೆ ಇಳಿದಿದೆ. ಜುಲೈ 27ರಂದು ದೇಶದಲ್ಲಿ ಸರಾಸರಿ ಹೊಸ ಪ್ರಕರಣಗಳ ಸಂಖ್ಯೆ 46,760 ಆಗಿತ್ತು. ಇದು ದ್ವಿಗುಣಗೊಂಡು ಉತ್ತುಂಗ ತಲುಪಲು 52 ದಿನ ಆಗಿತ್ತು. ಅಂತೆಯೇ ಅದೇ ಪ್ರಮಾಣಕ್ಕೆ ಮತ್ತೆ ಇಳಿಯಲು 43 ದಿನಗಳಾಗಿವೆ ಎನ್ನುವುದು ವಿಶ್ಲೇಷಣೆಯಿಂದ ತಿಳಿದುಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News