ಬಿಹಾರ: ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ ಪ್ಲೂರಲ್ಸ್ ಪಕ್ಷಾಧ್ಯಕ್ಷೆ ಪುಷ್ಪಂ

Update: 2020-11-10 13:12 GMT

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಂದುವರಿದಿರುವಂತೆಯೇ ರಾಜ್ಯದಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಪ್ಲೂರಲ್ಸ್ ಪಾರ್ಟಿ ಮುಖ್ಯಸ್ಥ ಪುಷ್ಪಂ ಪ್ರಿಯಾ ಚೌಧುರಿ ಆರೋಪಿಸಿದ್ದಾರೆ. ಪಾಟ್ನಾದ ಬಂಕೀಪುರ್ ಹಾಗೂ ಮಧುಬನಿ ಜಿಲ್ಲೆಯ ಬಿಸ್ಫಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಾಗೂ ಪ್ರಸ್ತುತ ಲಂಡನ್‍ಗೆ ವಾಪಸಾಗಿರುವ ಪ್ರಿಯಾ ಬಿಜೆಪಿ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ತಮ್ಮ ಪಕ್ಷಕ್ಕೆ ದೊರೆತ ಮತಗಳನ್ನು ಎಲ್ಲಾ ಬೂತುಗಳಲ್ಲಿ ಎನ್‍ಡಿಎಗೆ ವರ್ಗಾಯಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

"ಬಿಹಾರದಲ್ಲಿ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ. ಬೂತ್-ಮಟ್ಟದ ಅಂಕಿಅಂಶ ಪರಿಶೀಲಿಸಿ. ಪ್ಲೂರಲ್ ಮತಗಳನ್ನು ಕದಿಯಲಾಗಿದೆ. ಬಿಜೆಪಿ ಅವ್ಯವಹಾರ ನಡೆಸಿದೆ. ಎಲ್ಲಾ ಬೂತುಗಳಲ್ಲಿ ಎನ್‍ಡಿಎ ನಮ್ಮ ಮತಗಳನ್ನು ಪಡೆದಿದೆ,'' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಬಂಕೀಪುರ್‍ನಲ್ಲಿ ಅವರಿಗೆ 121 ಮತಗಳು ಮಾತ್ರ ದೊರಕಿದ್ದರೆ, ಬಿಸ್ಫಿ ಕ್ಷೇತ್ರದಲ್ಲಿ ನೋಟಾ ಮತಗಳಿಗಿಂತಲೂ ಕಡಿಮೆ ಮತಗಳು ದೊರಕಿವೆ. ಇವಿಎಂಗಳನ್ನು ತಿರುಚಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News