ಐಪಿಎಲ್ : ರಾಹುಲ್ ಗರಿಷ್ಠ ರನ್, ರಬಾಡ ಗರಿಷ್ಠ ವಿಕೆಟ್ ಸರದಾರ

Update: 2020-11-11 06:35 GMT

ದುಬೈ: ಹದಿಮೂರನೇ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಲೀಗ್ ಮಂಗಳವಾರ ಮುಕ್ತಾಯವಾಗಿದೆ.  ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆ.ಎಲ್. ರಾಹುಲ್ ಟೂರ್ನಿಯೊಂದರಲ್ಲಿ ಗರಿಷ್ಠ ರನ್ ಗಳಿಸಿದವರಿಗೆ ನೀಡುವ 'ಆರೆಂಜ್ ಕ್ಯಾಪ್' ಗೆದ್ದುಕೊಂಡರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗದ ಬೌಲರ್ ಕಾಗಿಸೊ ರಬಾಡ ಕೂಟವೊಂದರಲ್ಲಿ ಗರಿಷ್ಠ ವಿಕೆಟ್ ಪಡೆದವರಿಗೆ ನೀಡಲಾಗುವ 'ಪರ್ಪಲ್ ಕ್ಯಾಪ'ನ್ನು ಧರಿಸಿದ್ದಾರೆ.

ದುಬೈ ಇಂಟರ್ ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ನಲ್ಲಿ ಡೆಲ್ಲಿ ತಂಡವನ್ನು ಮಣಿಸಿರುವ ಮುಂಬೈ ಇಂಡಿಯನ್ಸ್ ದಾಖಲೆ 5ನೇ ಬಾರಿ ಐಪಿಎಲ್ ಕಿರೀಟ ಧರಿಸಿದೆ.

ರಾಹುಲ್ 14 ಪಂದ್ಯಗಳಲ್ಲಿ ಒಟ್ಟು 670 ರನ್ ಗಳಿಸಿದ್ದು, ಈ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗರಿಷ್ಠ ವೈಯಕ್ತಕ ಸ್ಕೋರ್(132 ) ಗಳಿಸಿದ್ದರು.  ಡೆಲ್ಲಿ ಬ್ಯಾಟ್ಸ್ ಮನ್ ಶಿಖರ್ ಧವನ್ ಒಟ್ಟು 618 ರನ್ ಗಳಿಸಿ 2ನೇ ಸ್ಥಾನ ಪಡೆದರೆ, ಸನ್ ರೈಸರ್ಸ್ ನಾಯಕ ಡೇವಿಡ್ ವಾರ್ನರ್ (548), ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ (519) ಹಾಗೂ ಮುಂಬೈ ಇಂಡಿಯನ್ಸ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ (516) ಕ್ರಮವಾಗಿ 3ನೇ, 4ನೇ ಹಾಗೂ 5ನೇ ಸ್ಥಾನ ಪಡೆದಿದ್ದಾರೆ.

“ನನ್ನ ಎಲ್ಲ ಬೆಂಬಲಿಗರಿಗೆ ಧನ್ಯವಾದಗಳು. ಆರೆಂಜ್ ಕ್ಯಾಪ್ ಗೆಲ್ಲುವುದು ನಿಜಕ್ಕೂ ಉತ್ತಮ. ಈ ಟೂರ್ನಿಯಲ್ಲಿ ನಾಯಕನಾಗಿ ಸಾಕಷ್ಟು ಕಲಿತ್ತಿದ್ದೇನೆ’’ಎಂದು ರಾಹುಲ್ ಪ್ರತಿಕ್ರಿಯಿಸಿದರು.

ಬೌಲಿಂಗ್ ನಲ್ಲಿ ರಬಾಡ 17 ಪಂದ್ಯಗಳಲ್ಲಿ 30 ವಿಕೆಟ್ ಗಳನ್ನು ಪಡೆದು ಗರಿಷ್ಠ ವಿಕೆಟ್ ಗಳನ್ನು ಪಡೆದ ಸಾಧನೆ ಮಾಡಿದರು. ಮುಂಬೈ ಇಂಡಿಯನ್ಸ್ ಬೌಲರ್ ಜಸ್ಪ್ರಿತ್ ಬುಮ್ರಾ ಈ ಋತುವಿನಲ್ಲಿ ಎರಡನೇ ಗರಿಷ್ಠ ವಿಕೆಟ್(27) ವಿಕೆಟ್ ಗಳನ್ನು ಪಡೆದಿದ್ದಾರೆ. ಮುಂಬೈ ತಂಡದ ಇನ್ನೋರ್ವ ಬೌಲರ್ ಟ್ರೆಂಟ್ ಬೌಲ್ಟ್ 17 ಪಂದ್ಯಗಳಲ್ಲಿ 25 ವಿಕೆಟ್ ಗಳನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News