ಸೌದಿ ಅರೇಬಿಯದಲ್ಲಿ ಸ್ಫೋಟ: ನಾಲ್ವರಿಗೆ ಗಾಯ

Update: 2020-11-11 17:43 GMT

ಜಿದ್ದಾ (ಸೌದಿ ಅರೇಬಿಯ), ನ. 11: ಸೌದಿ ಅರೇಬಿಯದ ಜಿದ್ದಾ ನಗರದ ಸ್ಮಶಾನವೊಂದರಲ್ಲಿ, ಮೊದಲ ಮಹಾಯುದ್ಧ ಕೊನೆಗೊಂಡ ದಿನದ ಸ್ಮರಣಾರ್ಥ ಬುಧವಾರ ನಡೆದ ಕಾರ್ಯಕ್ರಮವೊಂದರ ವೇಳೆ ಸ್ಫೋಟವೊಂದು ಸಂಭವಿಸಿದ್ದು, ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.

ಈ ಸಮಾರಂಭದಲ್ಲಿ ಯುರೋಪಿಯನ್ ರಾಜತಾಂತ್ರಿಕರು ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಫ್ರಾನ್ಸ್‌ನ ವಿದೇಶ ಸಚಿವಾಲಯ ತಿಳಿಸಿದೆ.

‘‘ಮೊದಲ ಮಹಾಯುದ್ಧ ಕೊನೆಗೊಂಡ ದಿನದ ವಾರ್ಷಿಕ ಸಮಾರಂಭವನ್ನು ಜಿದ್ದಾದಲ್ಲಿರುವ ಮುಸ್ಲಿಮೇತರ ಸ್ಮಶಾನದಲ್ಲಿ ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಫ್ರಾನ್ಸ್ ಸೇರಿದಂತೆ ಹಲವು ದೇಶಗಳ ಕೌನ್ಸುಲರ್ ಅಧಿಕಾರಿಗಳು ಭಾಗವಹಿಸಿದ್ದರು. ಅವರನ್ನು ಗುರಿಯಾಗಿಸಿ ಬುಧವಾರ ಬೆಳಗ್ಗೆ ಸುಧಾರಿತ ಸ್ಫೋಟಕ ಸಾಧನವೊಂದನ್ನು ಸ್ಫೋಟಿಸಲಾಗಿದೆ. ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ’’ ಎಂದು ಸಚಿವಾಲಯ ಹೇಳಿದೆ.

 ಓರ್ವ ಗ್ರೀಕ್ ರಾಷ್ಟ್ರೀಯ ಮತ್ತು ಸೌದಿ ಭದ್ರತಾ ಅಧಿಕಾರಿ ಈ ‘ಹೇಡಿತನ’ದ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಮಕ್ಕಾ ಗವರ್ನರ್ ಕಚೇರಿಯ ಅಧಿಕಾರಿಗಳು ಸ್ಫೋಟ ನಡೆದ ಗಂಟೆಗಳ ಬಳಿಕ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News