ಅಮೆರಿಕ: ಜಾರ್ಜಿಯಾದಲ್ಲಿ ಮರು ಮತ ಎಣಿಕೆಗೆ ನಿರ್ಧಾರ

Update: 2020-11-12 06:45 GMT

ವಾಶಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿಂತ  14,000ಕ್ಕಿಂತ ಕಡಿಮೆ ಮತಗಳ ಮುನ್ನಡೆ ಸಾಧಿಸಿರುವ ಕಾರಣ ಅಮೆರಿಕದ ಜಾರ್ಜಿಯಾ ರಾಜ್ಯವು ಬುಧವಾರ ಮರು ಮತ ಎಣಿಕೆ ಮಾಡುವುದಾಗಿ ಪ್ರಕಟಿಸಿದೆ.

ಮುನ್ನಡೆಯ ಅಂತರ ಕಡಿಮೆ ಇರುವುದರಿಂದ ಮರು ಎಣಿಕೆಯ ಅವಶ್ಯಕತೆಯಿದೆ. ಅಧ್ಯಕ್ಷೀಯ ಚುನಾವಣೆಗೆ ಮಾತ್ರ ಕೈಯಲ್ಲಿ ಮರು ಮತ ಎಣಿಕೆ ಇರಲಿದೆ ಎಂದು ಜಾರ್ಜಿಯಾ ರಾಜ್ಯ ಕಾರ್ಯದರ್ಶಿ ಬ್ರಾಡ್ ರಫೆನ್ಸ್ ಪರ್ಗರ್ ಹೇಳಿದ್ದಾರೆ.ರಫೆನ್ಸ್‌ಪರ್ಗರ್ ರಿಪಬ್ಲಿಕನ್ ಪಕ್ಷಕ್ಕೆ ಸೇರಿದವರಾಗಿದ್ದಾರೆ.

ಜಾರ್ಜಿಯಾದಲ್ಲಿ 16 ಇಲೆಕ್ಟೋರಲ್ ಮತಗಳಿವೆ. ಮತದಾನದಲ್ಲಿ ಭಾರೀ ವಂಚನೆ ಹಾಗೂ ಚುನಾವಣಾ ದುಷ್ಕೃತ್ಯ ನಡೆದಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ. ಇಲ್ಲಿಯವರೆಗೆ ಅಂತಹ ಯಾವುದೇ ಪುರಾವೆಗಳಿಲ್ಲ ಎಂದು ರಾಜ್ಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಬುಧವಾರ ಹೊತ್ತಿಗೆ ನಿಯೋಜಿತ ಅಧ್ಯಕ್ಷ ಬೈಡನ್ 538 ಇಲೆಕ್ಟೋರಲ್ ಮತಗಳಲ್ಲಿ 279 ಮತಗಳನ್ನು ಗೆದ್ದಿದ್ದಾರೆ. ಜಾರ್ಜಿಯಾ ರಾಜ್ಯದಲ್ಲಿ ಸೋಲಾದರೂ ಅವರಿಗೆ ಅಧ್ಯಕ್ಷರಾಗಲು ಬೇಕಾಗುವಷ್ಟು ಮತಗಳಿವೆ. ಎಂದು 'ದಿ ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

ಟ್ರಂಪ್ ಅವರು ಜಾರ್ಜಿಯಾ ಜೊತೆಗೆ ಪೆನ್ಸಿಲ್ವೇನಿಯಾ, ಮಿಚಿಗನ್, ನೆವಾಡಾ, ಅರಿರೆನ ರಾಜ್ಯಗಳಲ್ಲಿ ಮೊಕದ್ದಮೆ ಹೂಡಿದ್ದಾರೆ ಹಾಗೂ ವಿಸ್ಕಾನ್ಸಿಸ್‌ನಲ್ಲಿ ಮತಗಳನ್ನು ಮರು ಎಣಿಕೆಗೆ ಕೋರಿದ್ದಾರೆ.

"ಅಂತರ ಕಡಿಮೆ ಇರುವುದರಿಂದ ಪ್ರತಿ ಕೌಂಟಿಯಲ್ಲಿ ಪೂರ್ಣ ಪ್ರಮಾಣದ ಮರು ಮತ ಎಣಿಕೆಯ ಅಗತ್ಯವಿರುತ್ತದೆ'' ಎಂದು ರಫೆನ್ಸ್ ಪೆರ್ಗರ್ ಅಟ್ಲಾಂಟಾದಲ್ಲಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News