ಮಾಸ್ಕ್ ಹಾಕದ್ದಕ್ಕೆ ಪ್ರಶ್ನಿಸಿದ ಮಾರ್ಷಲ್ ಮೇಲೆ ಹಣ ಬಿಸಾಕಿದ ಮಹಿಳೆ

Update: 2020-11-13 11:12 GMT

ಬೆಂಗಳೂರು, ನ.13: ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಮಹಿಳೆಗೆ ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದ ಬಿಬಿಎಂಪಿ ಮಾರ್ಷಲ್ ಮೇಲೆ ಹಣ ಬಿಸಾಕಿದ ಪ್ರಸಂಗ ನಡೆದಿದೆ. 

ಈ ವೀಡಿಯೋವನ್ನು ನೋಡಿದ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಮಹಿಳೆಯ ಈ ವರ್ತನೆ ಬಗ್ಗೆ ಗರಂ ಆಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಸುರಕ್ಷಿತ ಅಂತರ ಕಾಪಾಡಿಕೊಳ್ಳದಿದ್ದರೆ ಮಾಸ್ಕ್ ಧರಿಸಿದ ಇದ್ದರೆ ಮಾರ್ಷಲ್ಸ್ ಕೇಳುತ್ತಾರೆ. ಸರಕಾರದ ಸೂಚನೆಯ ಪ್ರಕಾರ ಅವರು ಕೆಲಸ ಮಾಡುತ್ತಾ ಇದ್ದಾರೆ. ಆದರೆ ಜನರು ಅವರ ಮೇಲೆ ಈ ರೀತಿ ಅತಿರೇಕ ವರ್ತನೆ ತೋರಿಸಬಾರದು ಎಂದಿದ್ದಾರೆ. 

ಆ ಮಹಿಳೆ ದುಡ್ಡು ಎಸೆಯೋ ವೀಡಿಯೋವನ್ನು ತಮ್ಮ ಟ್ವೀಟ್‍ನಲ್ಲಿ ಹಾಕಿದ್ದು, ಇಂತವರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News