ಅನಧಿಕೃತ ಗೋಡೆ ಬರಹಗಳ ವಿರುದ್ಧ ಶಿಸ್ತು ಕ್ರಮ: ಬಿಬಿಎಂಪಿ ಎಚ್ಚರಿಕೆ

Update: 2020-11-21 17:40 GMT

ಬೆಂಗಳೂರು, ನ.21: ನಗರದಲ್ಲಿ ಗೋಡೆ ಬರಹ ತೆರವಿಗೆ ಬಿಬಿಎಂಪಿ ಆದೇಶಿಸಿದ್ದು, ಮುಂದಿನ ದಿನಗಳಲ್ಲಿ ಅನಧಿಕೃತ ಗೋಡೆಬರಹ ಹಾಕಿದರೆ ಎಫ್‍ಐಆರ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಮುಂದಿನ ದಿನಗಳಲ್ಲಿ ಇಂತಹ ಯಾವುದೇ ಅನಧಿಕೃತ ಜಾಹೀರಾತುಗಳು ಪ್ರದರ್ಶಿಸದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಒಂದು ವೇಳೆ ಇಂತಹ ಪ್ರಕರಣಗಳು ಮರುಕಳಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಈ ಹಿಂದೆ ಹೈಕೋರ್ಟ್ ನಗರದಲ್ಲಿ ಜಾಹೀರಾತು ನಿಷೇಧಿಸಿ ಆದೇಶ ಹೊರಡಿಸಿತ್ತು. ಫ್ಲೆಕ್ಸ್ ಗಳ ನಿಷೇಧ ಬಳಿಕ ಕೆಲ ಜಾಹೀರಾತು ಕಂಪನಿಗಳು ಗೋಡೆ ಬರಹ ಬಳಸಲು ಶುರು ಮಾಡಿದ್ದವು. ಇದೀಗ ಗೋಡೆ ಬರಹ ತೆರವಿಗೂ ಹೈಕೋರ್ಟ್ ಆದೇಶಿಸಿದ್ದು, ಅಕ್ರಮವಾಗಿ ಫ್ಲೆಕ್ಸ್, ಬಂಟಿಂಗ್ ಹಾಕಿರುವುದನ್ನು ಸಮೀಕ್ಷೆ ನಡೆಸಲು ಬಿಬಿಎಂಪಿಗೆ ಸೂಚನೆ ನೀಡಿ, ವಾರ್ಡ್‍ವಾರು ಸಮೀಕ್ಷೆ ನಡೆಸಿ, ಗೋಡೆ ಬರಹ ತೆರವುಗೊಳಿಸುವಂತೆ ತಿಳಿಸಿತ್ತು. ಈ ಹಿನ್ನೆಲೆ ಬಿಬಿಎಂಪಿ ಆಯುಕ್ತರು ಬಿಬಿಎಂಪಿಯ ಎಂಟು ವಲಯದ ಜಂಟಿ ಆಯುಕ್ತರಿಗೆ ಗೋಡೆ ಬರಹ ತೆರವುಗೊಳಿಸುವಂತೆ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News