ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣ ಬೆಟ್ಟು ಮಾಡಿದ ಗುಲಾಂ ನಬಿ ಆಝಾದ್

Update: 2020-11-23 06:14 GMT

ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿರುವ ಪ್ರಮುಖ ನಾಯಕರ ಪೈಕಿ ಒಬ್ಬರಾಗಿರುವ ಗುಲಾಂ ನಬಿ ಆಝಾದ್ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತಿರುವುದಕ್ಕೆ ಮತ್ತೊಂದು ವಿವರಣೆ ನೀಡಿದ್ದಾರೆ.

 "ನಮ್ಮ ನಾಯಕರ ಸಮಸ್ಯೆ ಏನೆಂದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಟಿಕೆಟ್ ಲಭಿಸಿದರೆ ಅವರು ಮೊದಲಿಗೆ ಪಂಚ-ತಾರಾ ಹೊಟೇಲ್‌ನ್ನು ಕಾಯ್ದಿರಿಸುತ್ತಾರೆ. ಅಲ್ಲಿಯೂ ಸಹ ಅವರಿಗೆ ಡಿಲಕ್ಸ್ ಸ್ಥಳಬೇಕು. ಬಳಿಕ ಅವರು ಹವಾನಿಯಂತ್ರಿತ ಕಾರಿಲ್ಲದೆ ಓಡಾಡುವುದಿಲ್ಲ. ರಸ್ತೆ ಸರಿಇಲ್ಲದ ಕಡೆಗೆ ಅವರು ಹೋಗುವುದಿಲ್ಲ. ಪಂಚತಾರಾ ಹೊಟೇಲ್‌ನಲ್ಲಿ ಚುನಾವಣೆ ನಡೆಯುವುದಿಲ್ಲ. ಈ ಸಂಸ್ಕೃತಿಯನ್ನು ಬದಲಿಸುವ ತನಕ ನಾವು ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ'' ಎಂದು ಆಝಾದ್ ಎಚ್ಚರಿಕೆ ನೀಡಿದರು.

"ಬ್ಲಾಕ್ ನಾಯಕರು ಅಥವಾ ಜಿಲ್ಲಾ ನಾಯಕರು ತಮಗೆ ಸ್ಥಾನ ಲಭಿಸಿದ ತಕ್ಷಣ ತಮ್ಮ ಲೆಟರ್ ಪ್ಯಾಡ್ ಹಾಗೂ ವಿಸಿಟಿಂಗ್ ಕಾರ್ಡ್ ಮುದ್ರಿಸುತ್ತಾರೆ. ತಮ್ಮ ಕೆಲಸ ಇಷ್ಟೇ ಎಂದು ಭಾವಿಸುತ್ತಾರೆ. ಆದರೆ ಅಲ್ಲಿಂದಲ್ಲೇ ನಮ್ಮ ಕೆಲಸ ಆರಂಭವಾಗುತ್ತದೆ. ಉನ್ನತ ನಾಯಕತ್ವದಲ್ಲಿ ದೋಷವಿಲ್ಲ. ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ 4ರಿಂದ 5 ವರ್ಷಗಳಲ್ಲಿ ಐದು ರಾಜ್ಯಗಳಲ್ಲಿ ಜಯ ಸಾಧಿಸಿತ್ತು. ಆಗ ನಾನು ಚುನಾವಣಾ ವ್ಯವಹಾರಗಳ ಉಸ್ತುವಾರಿಯಾಗಿದ್ದೆ''ಎಂದು ಆಝಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News