ಶೂನ್ಯ ತ್ಯಾಜ್ಯ ಹೊರಸೂಸುವಿಕೆ ವಿದ್ಯುತ್ ಚಾಲಿತ ತಂತ್ರಜ್ಞಾನದ ಯಶಸ್ವಿ ಪರೀಕ್ಷೆ: ಇಂಡಿಯನ್ ಆಯಿಲ್

Update: 2020-11-27 16:50 GMT

ಬೆಂಗಳೂರು, ನ.27: ದೇಶದಲ್ಲಿ ವಿದ್ಯುತ್ ಚಾಲಿತ ಸಾರಿಗೆ ಉತ್ತೇಜಿಸುವ ಪ್ರಯತ್ನವಾಗಿ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿ., ‘ಶೂನ್ಯ-ತ್ಯಾಜ್ಯ ಹೊರಸೂಸುವಿಕೆ ವಿದ್ಯುತ್ ಚಾಲಿತ’ ಸಾರಿಗೆಯ ಪರಿಕಲ್ಪನೆಯ ಋಜುವಾತು(ಪ್ರೂಫ್ ಆಫ್ ಕಾನ್ಸೆಪ್ಟ್) ಕಾರ್ಯಸಾಧ್ಯತೆ ಅಧ್ಯಯನವನ್ನು ಬೆಂಗಳೂರಿನ ತನ್ನ ಒಂದು ಇಂಧನ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿದೆ ಎಂದು ಇಂಡಿಯನ್ ಆಯಿಲ್‍ನ ಮಾರುಕಟ್ಟೆ ವಿಭಾಗದ ಸಿಜಿಎಂ(ಸಾಂಸ್ಥಿಕ ಸಂವಹನ)ಸಾಧನಾ ಖೇರ್ ಮಿತ್ತಲ್ ತಿಳಿಸಿದ್ದಾರೆ.

ಶೂನ್ಯ ತ್ಯಾಜ್ಯ ಹೊರಸೂಸುವಿಕೆ ವಿದ್ಯುತ್ ಚಾಲಿತ ಸಾರಿಗೆ ಕಲ್ಪನೆ ವಿದ್ಯುತ್ ವಾಹನ(ಇವಿ)ಗಳಿಗೆ ಸೌರ ವಿದ್ಯುತ್ ಬಳಸಿ ಚಾರ್ಜ್ ಮಾಡಲು ಅವಕಾಶ ನೀಡುವ ಮೂಲಕ ಶೂನ್ಯ ತ್ಯಾಜ್ಯ ಹೊರಸೂಸುವಿಕೆಯನ್ನು ಖಾತ್ರಿ ಪಡಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಇವಿ ಚಾರ್ಜಿಂಗ್ ವ್ಯವಸ್ಥೆಯನ್ನು ಹೈಗ್ ಎನರ್ಜಿ ಎಂಬ ಟೆಕ್ ಮಹೀಂದ್ರದ ನವೋದ್ಯಮ ವಿನ್ಯಾಸ ಮಾಡಿದ್ದು, ಇದರಲ್ಲಿ ಮೂರು ಮುಖ್ಯ ವಿಶೇಷಗಳಿವೆ ಸೌರ ವಿದ್ಯುತ್ ಬಳಸಿಕೊಂಡು ವಿದ್ಯುತ್ ವಾಹನಗಳನ್ನು ಚಾರ್ಜ್ ಮಾಡುವುದು, ಗ್ರಿಡ್ ಮೂಲಸೌಕರ್ಯದಲ್ಲಿ ಯಾವುದೇ ಮೇಲ್ದರ್ಜೀಕರಣದ ಅಗತ್ಯವಿಲ್ಲ ಮತ್ತು ಗ್ರಿಡ್ ಸ್ಥಿತಿಸ್ಥಾಪಕತ್ವ ವ್ಯವಸ್ಥೆಯು ಅದರಲ್ಲೂ ದೂರದ ಪ್ರದೇಶಗಳಲ್ಲಿ ವಾಸ್ತುವಿನ್ಯಾಸದಿಂದಲೇ ಸುಧಾರಿತವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇಂಡಿಯನ್ ಆಯಿಲ್(ಚಿಲ್ಲರೆ ಮಾರಾಟ ವಿಭಾಗ)ನ ಕಾರ್ಯನಿರ್ವಾಹಕ ನಿರ್ದೇಶಕ ವಿಗ್ಯಾನ್ ಕುಮಾರ್ ಮಾತನಾಡಿ, ಇಂಡಿಯನ್ ಆಯಿಲ್ ನ ಪರ್ಯಾಯ ಇಂಧನದ ಭಾಗವಾಗಿ, ನಾವು ಈಗಾಗಲೇ ವಿವಿಧ ಕಂಪನಿಗಳ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ವಾಹನಗಳಿಗಾಗಿ 54 ಬ್ಯಾಟರಿ ಚಾರ್ಜಿಂಗ್/ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ ಎಂದು ಹೇಳಿದ್ದಾರೆ.

ಎಲೆಕ್ಟ್ರಿಕ್ ವಾಹನಗಳು ಮತ್ತು ಸ್ಟೇಷನರಿ ಅಪ್ಲಿಕೇಷನ್‍ಗಳಿಗಾಗಿ ಭಾರತದಲ್ಲಿ ಅಲ್ಯೂಮಿನಿಯಂ-ಏರ್ ಬ್ಯಾಟರಿ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲು ನಾವು ಫಿನರ್ಜಿ ಆಫ್ ಇಸ್ರೇಲ್‍ನಲ್ಲಿ ಅಲ್ಪ ಪಾಲನ್ನೂ ಪಡೆದುಕೊಂಡಿದ್ದೇವೆ. ಇವಿ ಅಳವಡಿಕೆಯ ಅನಿಶ್ಚಿತತೆಯ ನಡುವೆಯೂ ಗ್ರಿಡ್ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ನಮ್ಮ ಇಂಧನ ಕೇಂದ್ರಗಳಲ್ಲಿ ಇವಿ ಚಾರ್ಜಿಂಗ್ಗೆ ಹಸಿರು ವಿದ್ಯುತ್ ಅನ್ನು ಖಾತ್ರಿಪಡಿಸಲು ಸಮಗ್ರ ಪರಿಹಾರ ಕಂಡುಹಿಡಿಯಲು ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರಿನಾದ್ಯಂತ ಹೆಚ್ಚಿನ ಇಂಧನ ಕೇಂದ್ರಗಳಲ್ಲಿ ಪ್ರಾಯೋಗಿಕ ಅಧ್ಯಯನ ನಡೆಸಲಿದ್ದೇವೆ. ಈ ಪರಿಹಾರ ಅನನ್ಯವಾಗಿದ್ದು, ಇದು ನಾವು ನಮ್ಮ ಇಂಧನ ಕೇಂದ್ರಗಳನ್ನು ಸೌರ ವಿದ್ಯುದ್ದೀಕರಣಗೊಳಿಸಲು ನಾವು ಮಾಡಿರುವ ಹಾಲಿ ಹೂಡಿಕೆಯನ್ನು ಬಳಸಿಕೊಂಡು, ನಮ್ಮ ಇವಿ ಚಾರ್ಜಿಂಗ್ ಉಪಕ್ರಮವನ್ನು ಆರಂಭಿಸಲು ಉತ್ತಮ ಆಧಾರ ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ತಂತ್ರಜ್ಞಾನ ಹೈಬ್ರಿಡ್ ಮೈಕ್ರೊಗ್ರಿಡ್‍ಗಳನ್ನು ಬಳಸಿಕೊಂಡು ಇಂಟಲಿಜೆಂಟ್ ವಿದ್ಯುತ್-ವಾಹನ ಚಾಜಿರ್ಂಗ್ ಶಕ್ತಗೊಳಿಸುತ್ತದೆ. ಅಸ್ತಿತ್ವದಲ್ಲಿರುವ ಗ್ರಿಡ್ ಮೂಲಸೌಕರ್ಯವನ್ನು ಸೌರ ಪಿವಿ ಬ್ಯಾಟರಿಗಳೊಂದಿಗೆ ಸಂಯೋಜಿಸುವ ಮೂಲಕ ಹೈಬ್ರೀಡ್ ಮೈಕ್ರೊಗ್ರಿಡ್‍ಗಳನ್ನು ರೂಪಿಸಲಾಗಿದೆ. ಶೂನ್ಯ ತ್ಯಾಜ್ಯ ಹೊರಸೂಸುವಿಕೆ ವಿದ್ಯುತ್ ಚಾಲಿತ ಸಾರಿಗೆ ಅತ್ಯುನ್ನತ ಅಳವಡಿಕೆ ವ್ಯವಸ್ಥೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News