ಉತ್ತರ ಪ್ರದೇಶ: ಬಲವಂತದ ಮತಾಂತರ ತಡೆ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

Update: 2020-11-28 07:24 GMT

ಲಕ್ನೋ : ರಾಜ್ಯದಲ್ಲಿ ಬಲವಂತದ ಅಥವಾ ‘ಅಪ್ರಾಮಾಣಿಕ’ ಧಾರ್ಮಿಕ ಮತಾಂತರಗಳನ್ನು ತಡೆಯುವ ಉದ್ದೇಶ ಹೊಂದಿದ ಸುಗ್ರೀವಾಜ್ಞೆಯೊಂದಕ್ಕೆ ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಶನಿವಾರ ಸಹಿ ಹಾಕಿದ್ದಾರೆ.

ಉತ್ತರ ಪ್ರದೇಶ ಪ್ರೊಹಿಬಿಷನ್ ಆಫ್ ಅನ್‍ ಲಾಫುಲ್ ಕನ್ವರ್ಷನ್ ಆಫ್ ರಿಲಿಜನ್ ಆರ್ಡಿನೆನ್ಸ್, 2020 ಎಂದು ಈ ಸುಗ್ರೀವಾಜ್ಞೆಗೆ ಹೆಸರು ನೀಡಲಾಗಿದೆ. ಕರಡು ಸುಗ್ರೀವಾಜ್ಞೆಗೆ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟ ಕೆಲ ದಿನಗಳ ಹಿಂದೆ ಅನುಮೋದನೆ ನೀಡಿತ್ತು. ವಿವಾಹದ ಉದ್ದೇಶದಿಂದ ನಡೆಸುವ ಮತಾಂತರವನ್ನೂ ತಡೆಯುವ ಉದ್ದೇಶ ಈ ಸುಗ್ರೀವಾಜ್ಞೆಗಿದ್ದು ತಪ್ಪಿತಸ್ಥರಿಗೆ 10 ವರ್ಷ ತನಕ ಜೈಲು ಶಿಕ್ಷೆ ನೀಡಲಾಗುವುದು.

ಮಹಿಳೆಯೊಬ್ಬಳ ಮತಾಂತರವೇ ಏಕೈಕ ಉದ್ದೇಶ ವಿವಾಹಕ್ಕಿದೆ ಎಂದು ತಿಳಿದು ಬಂದಲ್ಲಿ ಅಂತಹ ವಿವಾಹವನ್ನು ಈ ಕಾನೂನಿನನ್ವಯ ರದ್ದುಗೊಳಿಸಲಾಗುವುದು. ವಿವಾಹವಾದ ನಂತರ ಮತಾಂತರ ಹೊಂದಲು ಬಯಸುವವರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಅರ್ಜಿ ಸಲ್ಲಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News