ಜನಸಂಖ್ಯೆ ಆಧಾರಿತ ಮೀಸಲಾತಿ ಅಗತ್ಯ: ನಟ ಚೇತನ್

Update: 2020-11-28 13:59 GMT

ಬೆಂಗಳೂರು, ನ.28: ರಾಜ್ಯದಲ್ಲಿ ಜನಸಂಖ್ಯೆ ಆಧಾರದ ಮೇಲೆ ಪ್ರತಿ ಸಮುದಾಯಗಳಿಗೆ ಮೀಸಲಾತಿ ಅಗತ್ಯವಿದೆ ಎಂದು ನಟ ಚೇತನ್ ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸರಕಾರ ಯಾವುದೋ ಒಂದು ಉದ್ದೇಶವನ್ನಿಟ್ಟುಕೊಂಡು ಲಿಂಗಾಯತರಿಗೆ ಅಷ್ಟೇ ಮೀಸಲಾತಿ ನೀಡಿದೆ. ಆದರೆ, ಎಲ್ಲ ಸಮುದಾಯಗಳಲ್ಲಿಯೂ ಹಿಂದುಳಿದವರಿದ್ದಾರೆ. ಆದುದರಿಂದಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಅಗತ್ಯವಿದೆ ಎಂದು ಹೇಳಿದರು.

ಆದಿವಾಸಿಗಳು, ಕುರುಬರು, ಬೆಸ್ತರು, ದಲಿತರು, ಮುಸಲ್ಮಾನರು ಸೇರಿದಂತೆ ಎಲ್ಲಾ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಅಗತ್ಯವಿದೆ. ಈ ಬಗ್ಗೆ ಚರ್ಚೆ ನಡೆಯಬೇಕು. ಶಿಕ್ಷಣ, ಉದ್ಯೋಗ ಸೇರಿದಂತೆ ಎಲ್ಲಾ ಸ್ತರಗಳಲ್ಲೂ ಮೀಸಲಾತಿ ಸಿಗಬೇಕಿದೆ ಎಂದಿದ್ದಾರೆ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News