ಟಿಆರ್ ಎಸ್ ಶಾಸಕ ನರಸಿಂಹಯ್ಯ ನಿಧನ

Update: 2020-12-01 06:14 GMT

ಹೊಸದಿಲ್ಲಿ: ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್)ಶಾಸಕ ನರಸಿಂಹಯ್ಯ ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.

ನರಸಿಂಹಯ್ಯ ಅವರು ನಾಗಾರ್ಜುನ ಸಾಗರ್ ಕ್ಷೇತ್ರದಿಂದ ಆಡಳಿತಾರೂಢ ಟಿಆರ್ ಎಸ್ ಶಾಸಕನಾಗಿ ಆಯ್ಕೆಯಾಗಿದ್ದರು.

ಕೊರೋನ ವೈರಸ್ ನಿಂದ ಚೇತರಿಸಿಕೊಂಡ ಬಳಿಕ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನರಸಿಂಹಯ್ಯ ಹೈದರಾಬಾದ್ ನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಲಗೊಂಡ ಜಿಲ್ಲೆಯ ಪಾಲೆಮ್ ಗ್ರಾಮದಲ್ಲಿ ಜನಿಸಿರುವ ನರಸಿಂಹಯ್ಯ ದಶಕಗಳ ಕಾಲ ಸಿಪಿಎಂ ಪಕ್ಷದ ನಾಯಕರಾಗಿದ್ದರು. 2017ರಲ್ಲಿ ಟಿಆರ್ ಎಸ್ ಗೆ ಸೇರ್ಪಡೆಯಾಗಿದ್ದರು.  ಸಿಪಿಎಂ ಟಿಕೆಟ್ ನಿಂದ ಎರಡು ಬಾರಿ ನಕ್ರೆಕಲ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2018ರಲ್ಲಿ ಕಾಂಗ್ರೆಸ್ ಹಿರಿಯನಾಯಕ ಕುಂದರ್ ಜನಾ ರೆಡ್ಡಿಯವರನ್ನು 7,771 ಮತಗಳಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News