ಬೆಂಗಳೂರು: ‘ಇನ್‌ಲ್ಯಾಂಡ್ ಎಡಿಲಾನ್’ ವಸತಿ ಸಮುಚ್ಚಯ ಉದ್ಘಾಟನೆ

Update: 2020-12-01 07:20 GMT

ಬೆಂಗಳೂರು, ಡಿ.1: ಕರ್ನಾಟಕದ ಅತ್ಯಂತ ಭರವಸೆಗೆ ಪಾತ್ರವಾದ ಬಿಲ್ಡರ್ಸ್‌ಗಳಲ್ಲೊಬ್ಬರಾದ ಇನ್-ಲ್ಯಾಂಡ್ ಬಿಲ್ಡರ್ಸ್‌ನ ಅತ್ಯುನ್ನತ ಯೋಜನೆಗಳಲ್ಲಿ ಒಂದಾದ ‘ಇನ್‌ಲ್ಯಾಂಡ್ ಎಡಿಲಾನ್’ ವಸತಿ ಸಮುಚ್ಚಯ ನ.22ರಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಂಡಿತು.

ಕೋವಿಡ್ ಶಿಷ್ಟಾಚಾರ ಪಾಲನೆಯ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕ ಹರಿ ಭಟ್ ಉದ್ಘಾಟನಾ ಚಾಲನೆ ನೀಡಿದರು. ಪಾಸ್ಟರ್ ಡಿಮೆಲ್ಲೋ ಆಶಿರ್ವದಿಸಿದರು ಮತ್ತು ಮೌಲಾನ ಪ್ರಾರ್ಥನೆ ನೆರವೇರಿಸಿದರು. ಸಂಸ್ಥೆಯ ಪರವಾಗಿ ಸರಸ್ವತಿ ಪ್ರಾರ್ಥಿಸಿದರು. ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿದರು. ಸಂಸ್ಥೆಯ ವ್ಯವಸ್ಥಾಪಕ ಮತ್ತು ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್‌ರವರು ವಸತಿ ಸಮುಚ್ಚಯದ ಭೂಮಾಲಕರಾದ ರತ್ನಾಕರ್ ಹೆಗ್ಡೆ ಹಾಗೂ ಗೀತಾ ಆರ್. ಹೆಗ್ಡೆಯವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.

ಬಳಿಕ ಮಾತನಾಡಿದ ಸಿರಾಜ್ ಅಹ್ಮದ್, 4 ಅಂತಸ್ತುಗಳ 116 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿರುವ ‘ಇನ್‌ಲ್ಯಾಂಡ್ ಎಡಿಲಾನ್’ ವಸತಿ ಸಮುಚ್ಚಯವು ಮೆಘಾ ನಗರದ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾದ ಯಲಹಂಕ ನ್ಯೂಟೌನ್‌ನಲ್ಲಿದ್ದು, ವಿಮಾನ ನಿಲ್ದಾಣದ ಮಖ್ಯ ರಸ್ತೆಯ ಅನತಿ ದೂರದಲ್ಲಿದೆ. ಆಧುನಿಕ ಹಾಗೂ ಸುಸಜ್ಜಿತ ಸೌಲಭ್ಯಗಳನ್ನು ಹೊಂದಿರುವ ಈ ಯೋಜನೆಯು ಕ್ಲಬ್ ಹೌಸ್, ಈಜುಕೊಳ, ಸಿಸಿಟಿವಿ ಭದ್ರತೆ ಹಾಗೂ ಸ್ಟಾಂಡ್ ಬೈ ಪವರ್ ಸಪ್ಲಾಯ್‌ಗಳನ್ನು ಮೀಸಲಾಗಿರಿಸಿದೆ. ಪ್ರಮುಖ ಶಾಲೆಗಳು, ಕಾಲೇಜು ಮತ್ತು ಶಾಪಿಂಗ್ ಮಾಲ್‌ಗಳು ಈ ವಸತಿ ಸಮುಚ್ಚಯದ ಸಮೀಪದಲ್ಲೇ ಇವೆ ಎಂದರು.

34 ವರ್ಷಗಳ ಅನುಭವವಿರುವ ಇನ್‌ಲ್ಯಾಂಡ್ ಸಂಸ್ಥೆಯು ಈವರೆಗೆ ಅತ್ಯುನ್ನತ ವಸತಿ ಹಾಗೂ ಖಾಸಗಿ ಕಟ್ಟಡಗಳನ್ನು ಕರ್ನಾಟಕದ ಜನರಿಗೆ ಒದಗಿಸಿದೆ. ಮಂಗಳೂರು ನಮ್ಮ ಜನ್ಮಭೂಮಿಯಾಗಿದ್ದು ಮುಂದೆ ಬೆಂಗಳೂರು ನಮ್ಮ ಕರ್ಮ ಭೂಮಿ ಆಗಲಿದೆ ಎಂದರು. ಮುಂದೆಯೂ ನಾವು ಅನೇಕ ಯೋಜನೆಗಳನ್ನು ಮಾಡಲಿದ್ದು, ಬೆಂಗಳೂರಿನ ಅತಿ ಸಾಕ್ಷರತೆ ಮತ್ತು ಬುದ್ದಿವಂತ ಜನರ ನಿಷ್ಠೆ ಮತ್ತು ನಂಬಿಕೆಗೆ ಪಾತ್ರರಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್-ಲ್ಯಾಂಡ್ ಸಂಸ್ಥೆಯು ಶೀಘ್ರದಲ್ಲೇ ತನ್ನ ಇನ್ನೊಂದು ಹೆಗ್ಗುರುತಾದ ‘ಇನ್‌ಲ್ಯಾಂಡ್ ಬ್ಯುಸಿನೆಸ್ ಪಾರ್ಕ್’ ಎಂಬ ವಾಣಿಜ್ಯ ಯೋಜನೆಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.

ಈ ಅಲ್ಟ್ರಾ ಮಾಡರ್ನ್ ವಾಣಿಜ್ಯ ಸಂಕೀರ್ಣವು ಬಿಜೈ ಮಖ್ಯ ರಸ್ತೆಯಲ್ಲಿದ್ದು, ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಮತ್ತು ಭಾರತ್ ಮಾಲ್ ಸಮೀಪದಲ್ಲಿದೆ. ಐಟಿ, ಕೈಗಾರಿಕ ಘಟಕ, ಬಂದರು ಮತ್ತು ವಿಮಾನ ನಿಲ್ದಾಣ ವಿಸ್ತರಣೆಯೊಂದಿಗೆ ಮಂಗಳೂರು ಆರ್ಥಿಕ ಪ್ರಗತಿಯ ಹೊಸ್ತಿಲಿನಲ್ಲಿದ್ದು ಈ ವಾಣಿಜ್ಯ ಸಂಕೀರ್ಣವು ಹೂಡಿಕೆದಾರರಿಕೆಗೆ ಒಂದು ಅನನ್ಯ ಅವಕಾಶವನ್ನು ಒದಗಿಸಿದೆ. ಈ ವಾಣಿಜ್ಯ ಯೋಜನೆಯು ಈಗಾಗಲೇ ರೆರಾದಿಂದ ಅನುಮೋದನೆ ಪಡೆದಿರುತ್ತದೆ ಮತ್ತು ಈ ಸಂಕೀರ್ಣಕ್ಕೆ ಡಿ.17ರಂದು ಶಿಲಾನ್ಯಾಸ ನೆರವೇರಲಿದೆ ಎಂದು ಅವರು ತಿಳಿಸಿದರು.

ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.inlandbuilders.netನ್ನು ಮೊ.ಸಂ.: 9880138015, 9972089099, 9972014055 ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News