ಕೊರೋನ: ಮಾನವೀಯ ನೆರವಿನ ಅಗತ್ಯವಿರುವವರ ಸಂಖ್ಯೆಯಲ್ಲಿ ಹೆಚ್ಚಳ: ವಿಶ್ವಸಂಸ್ಥೆ

Update: 2020-12-01 18:43 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಡಿ. 1: ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಮಾನವೀಯ ನೆರವಿನ ಅಗತ್ಯವಿರುವ ಜನರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

2021ರಲ್ಲಿ 33 ಮಂದಿಯಲ್ಲಿ ಒಬ್ಬರಿಗೆ ಆಹಾರ, ನೀರು ಮತ್ತು ನೈರ್ಮಲ್ಯ ಪರಿಕರಗಳು ಮುಂತಾದ ಮೂಲ ಅವಶ್ಯಕತೆಗಳನ್ನು ಪೂರೈಸಲು ನೆರವಿನ ಅಗತ್ಯವಿರುತ್ತದೆ ಹಾಗೂ ಇದು ಈ ವರ್ಷಕ್ಕೆ ಹೋಲಿಸಿದರೆ 40 ಶೇಕಡ ಹೆಚ್ಚಳವಾಗಿದೆ ಎಂದು ವಿಶ್ವಸಂಸ್ಥೆ ಮಂಗಳವಾರ ತನ್ನ ‘ಜಾಗತಿಕ ಮಾನವೀಯ ಮುನ್ನೋಟ 2021’ರಲ್ಲಿ ಹೇಳಿದೆ.

ಈ ಸಂಖ್ಯೆಯು ಜಾಗತಿಕ ಮಟ್ಟದಲ್ಲಿ 23.5 ಕೋಟಿಯಷ್ಟಾಗುತ್ತದೆ. ಈ ಪೈಕಿ ಹೆಚ್ಚಿನವರು ಸಿರಿಯ, ಯೆಮನ್, ಅಫ್ಘಾನಿಸ್ತಾನ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ಮತ್ತು ಇಥಿಯೋಪಿಯಗಳಲ್ಲಿ ನೆಲೆಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News