ಉ. ಕೊರಿಯ ನಾಯಕನಿಗೆ ಚೀನಾದಿಂದ ಕೊರೋನ ಲಸಿಕೆ?

Update: 2020-12-01 18:46 GMT

ಸಿಯೋಲ್ (ದಕ್ಷಿಣ ಕೊರಿಯ), ಡಿ. 1: ಚೀನಾವು ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಮತ್ತು ಅವರ ಕುಟುಂಬ ಸದಸ್ಯರಿಗೆ ಪ್ರಾಯೋಗಿಕ ಕೊರೋನ ವೈರಸ್ ಲಸಿಕೆಯನ್ನು ಒದಗಿಸಿದೆ ಎಂದು ಎರಡು ಜಪಾನಿ ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಅವೆುರಿಕದ ವೀಕ್ಷಕರೊಬ್ಬರು ಹೇಳಿದ್ದಾರೆ.

ಕಿಮ್ ಕುಟುಂಬ ಸದಸ್ಯರು ಮತ್ತು ಉತ್ತರ ಕೊರಿಯದ ಹಲವು ಹಿರಿಯ ಅಧಿಕಾರಿಗಳಿಗೆ ಕೊರೋನ ವೈರಸ್ ಲಸಿಕೆಯನ್ನು ಚುಚ್ಚಲಾಗಿದೆ ಎಂದು ವಾಶಿಂಗ್ಟನ್‌ನಲ್ಲಿರುವ ‘ಸೆಂಟರ್ ಫಾರ್ ದ ನ್ಯಾಶನಲ್ ಇಂಟರೆಸ್ಟ್’ನಲ್ಲಿ ಉತ್ತರ ಕೊರಿಯ ಪರಿಣತ ಹ್ಯಾರಿ ಕಝಿಯನಿಸ್ ಹೇಳಿದ್ದಾರೆ.

ಆದರೆ, ಕಿಮ್ ಕುಟುಂಬಕ್ಕೆ ಯಾವ ಕಂಪೆನಿಯು ಕೊರೋನ ವೈರಸ್ ಲಸಿಕೆಯನ್ನು ಪೂರೈಸಿದೆ ಎನ್ನುವುದು ಸ್ಪಷ್ಟವಾಗಿಲ್ಲ. ಚೀನಾದ ಕನಿಷ್ಠ ಮೂರು ಕಂಪೆನಿಗಳು ಕೊರೋನ ವೈರಸ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News