10,000 ಆಸ್ಟ್ರೇಲಿಯನ್ನರು ಭಾರತದಲ್ಲಿ ಬಂಧಿ: ಮೊರಿಸನ್

Update: 2020-12-11 16:48 GMT

ಮೆಲ್ಬರ್ನ್ (ಆಸ್ಟ್ರೇಲಿಯ), ಡಿ. 11: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 39,000 ಆಸ್ಟ್ರೇಲಿಯನ್ ಪ್ರಜೆಗಳು ಮನೆಗೆ ವಾಪಸಾಗುವುದಕ್ಕಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯದ ಪ್ರಧಾನಿ ಸ್ಕಾಟ್ ಮೊರಿಸನ್ ಶುಕ್ರವಾರ ಹೇಳಿದ್ದಾರೆ. ಈ ಪೈಕಿ ಅತಿ ಹೆಚ್ಚು ಅಂದರೆ 10,000ಕ್ಕೂ ಅಧಿಕ ಮಂದಿ ಭಾರತದಲ್ಲಿದ್ದಾರೆ.

ರಾಷ್ಟ್ರೀಯ ಕ್ಯಾಬಿನೆಟ್ ಸಭೆಯ ಬಳಿಕ ಸುದ್ದಿಗಾರರೊದಿಗೆ ಮಾತನಾಡಿದ ಮೊರಿಸನ್, ಈ ವರ್ಷದ ಸೆಪ್ಟಂಬರ್ 18ರ ಬಳಿಕ 45,950ಕ್ಕೂ ಅಧಿಕ ಆಸ್ಟ್ರೇಲಿಯನ್ ಪ್ರಜೆಗಳನ್ನು ವಾಪಸ್ ಕರೆತರಲಾಗಿದೆ ಹಾಗೂ ಸುಮಾರು 39,000 ಮಂದಿ ಈಗಲೂ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದರು.

‘‘ಆಸ್ಟ್ರೇಲಿಯಕ್ಕೆ ವಾಪಸಾಗಲು ಬಯಸುವವರ ಪೈಕಿ ಅತಿ ಹೆಚ್ಚು ಮಂದಿ ಭಾರತದಲ್ಲಿದ್ದಾರೆ. ಅಲ್ಲಿ 10,000ಕ್ಕೂ ಅಧಿಕ ಆಸ್ಟ್ರೇಲಿಯನ್ನರಿದ್ದಾರೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News