30 ವರ್ಷಗಳಲ್ಲಿ ಪಾಕ್‌ನಲ್ಲಿ 138, ಭಾರತದಲ್ಲಿ 116 ಪತ್ರಕರ್ತರ ಹತ್ಯೆ: ಐಸಿಜೆ ಶ್ವೇತಪತ್ರ ವರದಿ

Update: 2020-12-12 16:27 GMT
ಸಾಂದರ್ಭಿಕ ಚಿತ್ರ

ಇಸ್ಲಾಮಬಾದ್,ಡಿ.12: 1990ರಿಂದೀಚೆಗೆ ಪಾಕಿಸ್ತಾನದಲ್ಲಿ ಕನಿಷ್ಠ 138 ಮಂದಿ ಹಾಗೂ ಭಾರತದಲ್ಲಿ 116 ಪತ್ರಕರ್ತರು ಪತ್ರಕರ್ತರು ಸಾವನ್ನಪ್ಪಿದ್ದಾರೆಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಐಸಿಜೆ) ಶನಿವಾರ ಬಹಿರಂಗಪಡಿಸಿದೆ,

ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟವು ಶುಕ್ರವಾರದಂದು ಜಾಗತಿಕ ಪತ್ರಿಕೋದ್ಯಮದ ಕುರಿತಾಗಿ ಶ್ವೇತಪತ್ರವೊಂದನ್ನು ಪ್ರಕಟಿಸಿದ್ದು, ‘‘ಇರಾಕ್,ಮೆಕ್ಸಿಕೊ, ಫಿಲಿಪ್ಪೀನ್ಸ್ , ಪಾಕಿಸ್ತಾನ ಹಾಗೂ ಭಾರತ, ಪ್ರಪಂಚದಲ್ಲಿಯೇ ಪತ್ರಿಕೋದ್ಯಮಕ್ಕೆ ಅತ್ಯಂತ ಅಪಾಯಕಾರಿಯಾದ ದೇಶಗಳಾಗಿವೆ’’ ಎಂದು ಅದು ತಿಳಿಸಿರುವುದಾಗಿ, ಡಾನ್ ಸುದ್ದಿ ಸಂಸ್ಥೆ ಶನಿವಾರ ವರದಿ ಮಾಡಿದೆ.

1990ರಿಂದೀಚೆಗೆ ಪತ್ರಕರ್ತರ ಹತ್ಯೆಗಳು ನಡೆದ ದೇಶಗಳ ಪಟ್ಟಿಯಲ್ಲಿ ಭಾರತೀಯ ಉಪಖಂಡದ ದೇಶಗಳಾದ ಭಾರತ ಹಾಗೂ ಪಾಕಿಸ್ತಾನ ಪ್ರತಿವರ್ಷವೂ ಕಾಣಿಸಿಕೊಂಡಿವೆ ಎಂದು ಶ್ವೇತಪತ್ರವು ತಿಳಿಸಿದೆ. ಈ ಅವಧಿಯಲ್ಲಿ ಪಾಕಿಸ್ತಾನದಲ್ಲಿ 138 ಹಾಗೂ ಭಾರತದಲ್ಲಿ 116 ಪತ್ರಕರ್ತರು ಹತ್ಯೆಯಾಗಿದ್ದಾರೆ. ಏಶ್ಯಾ ಪೆಸಿಫಿಕ್ ಪ್ರಾಂತದಲ್ಲಿ ನಡೆದ ಪತ್ರಕರ್ತರ ಒಟ್ಟು ಕಗ್ಗೊಲೆ ಪ್ರಕರಣಗಳ ಪೈಕಿ ಶೇ.40ರಷ್ಟು ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆದಿರುವುದಾಗಿ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News