ನವಾಲ್ ನಿಗೆ ವಿಷವುಣಿಸಿದ್ದು ರಶ್ಯ ಸರಕಾರದ ಭದ್ರತಾ ಸಿಬ್ಬಂದಿ

Update: 2020-12-16 18:38 GMT

ಮಾಸ್ಕೋ (ರಶ್ಯ), ಡಿ. 16: ರಶ್ಯದ ಪ್ರತಿಪಕ್ಷ ನಾಯಕ ಹಾಗೂ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ತೀವ್ರ ಟೀಕಾಕಾರ ಅಲೆಕ್ಸಿ ನವಾಲ್ನಿಗೆ ವಿಷವುಣಿಸಿದ ರಶ್ಯ ಸರಕಾರಿ ಭದ್ರತಾ ಸಂಸ್ಥೆಯ ವ್ಯಕ್ತಿಗಳನ್ನು ತಾನು ಗುರುತಿಸಿದ್ದೇನೆ ಎಂದು ಹೇಳುವ ಜಂಟಿ ಮಾಧ್ಯಮ ತನಿಖಾ ವರದಿಯನ್ನು ರಶ್ಯ ಬುಧವಾರ ತಿರಸ್ಕರಿಸಿದೆ.

‘‘ಸೈಬರ್ ಕನ್ನದ ಬಗ್ಗೆಯಾಗಲಿ, ನವಾಲ್ನಿಗೆ ವಿಷಪ್ರಾಶನವಾಗಿರುವ ಬಗ್ಗೆಯಾಗಲಿ ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳು ರಶ್ಯದ ವಿರುದ್ಧ ಮಾಡುವ ಹೊಸ ಆರೋಪಗಳಿಗೆ ನಾವು ಹೊಂದಿಕೊಂಡಿದ್ದೇವೆ’’ ಎಂದು ರಶ್ಯ ವಿದೇಶ ಸಚಿವ ಸರ್ಗಿ ಲವ್ರೊವ್ ಝಾಗ್ರೆಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನವಾಲ್ನಿ ಕೊಲೆಗೆ ಯತ್ನಿಸಿದ ರಶ್ಯದ ಎಫ್‌ಎಸ್‌ಬಿ ಭದ್ರತಾ ಸೇವೆಯ ವ್ಯಕ್ತಿಗಳನ್ನು ಗುರುತಿಸಲಾಗಿದೆ ಎಂದು ಜಂಟಿ ಮಾಧ್ಯಮ ತನಿಖಾ ವರದಿ ಹೇಳಿದೆ.

ಬಳಿಕ, ಈ ವರದಿಗೆ ಪ್ರತಿಕ್ರಿಯಿಸಿದ ನವಾಲ್ನಿ, ‘‘ನನ್ನ ಕೊಲೆಯತ್ನ ಪ್ರಕರಣವನ್ನು ಈಗ ಬೇಧಿಸಲಾಗಿದೆ. ಹಂತಕರ ತಂಡವು ವರ್ಷಗಳ ಕಾಲ ನನ್ನ ಬೆನ್ನ ಹಿಂದೆ ಬಿದ್ದಿತ್ತು’’ ಎಂಬುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News