ಆತ್ಮ ‘ಬರ್ಬರ’ ಭಾರತ-ಕೆಲವು ವರದಿಗಳು

Update: 2020-12-22 19:30 GMT

ಕೋವಿಡ್ ಕಾಲಘಟ್ಟದಲ್ಲಿ ಭಾರತ ವಿಶ್ವಕ್ಕೇ ಗುರುವಾಗಿ ನಿರ್ವಹಿಸಿದೆ ಎಂದು ಮೋದಿ ಸರಕಾರ ಕೊಚ್ಚಿಕೊಳ್ಳುತ್ತದೆ. ಆದರೆ ವಾಸ್ತವ ಅದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆಯೆಂದು ಹಲವಾರು ಸ್ವಾಯತ್ತ ಸಂಸ್ಥೆಗಳ ವರದಿಗಳು ಸ್ಪಷ್ಟಪಡಿಸಿವೆ.
ಉದಾಹರಣೆಗೆ ‘ರೈಟ್ ಟು ಫುಡ್ ಕ್ಯಾಂಪೇನ್’ ಸಂಸ್ಥೆಯು ಕೋವಿಡ್ ಅವಧಿಯಲ್ಲಿ ದೇಶದ ಹಲವಾರು ಭಾಗಗಳಲ್ಲಿ ಭೇಟಿ ಮಾಡಿ, ಸಂತ್ರಸ್ತರ ಅನುಭವಗಳನ್ನಾಧರಿಸಿದ ‘ಹಂಗರ್ ವಾಚ್’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಈ ಅವಧಿಯಲ್ಲಿ ಶೇ. 27ರಷ್ಟು ಮಂದಿ ಪ್ರತಿರಾತ್ರಿ ಹೊಟ್ಟೆಗಿಲ್ಲದೆ ಮಲಗಿದ್ದಾರೆ. ಪ್ರತಿ 20 ಮನೆಗಳಲ್ಲಿ ಒಂದು ಮನೆಯಲ್ಲಿ ಒಲೆಯನ್ನೇ ಹಚ್ಚಿರಲಿಲ್ಲ. ಇದು ಹೆಚ್ಚಾಗಿ ಕಂಡುಬಂದಿದ್ದೂ ಮೋದಿಯರ ಗುಜರಾತಿನಲ್ಲಿ ಎಂದು ಕೂಡಾ ಆ ವರದಿ ಸ್ಪಷ್ಟಪಡಿಸುತ್ತದೆ. 


ಪ್ರಧಾನಿ ಮೋದಿಯವರ ಆತ್ಮ ನಿರ್ಭರ ನೀತಿಗಳು ಅಂಬಾನಿ ಹಾಗೂ ಆದಾನಿಗಳನ್ನು ಭರಪೂರವಾಗಿ ಪ್ರಬಲರನ್ನಾಗಿಸುತ್ತಾ ಉಳಿದ ಭಾರತವನ್ನು ದುರ್ಬಲವಾಗಿಸುತ್ತಿರುವುದು ಈಗ ಎಲ್ಲರ ಅನುಭವಕ್ಕೂ ಬರುತ್ತಿದೆ. ರೈತ ಭಾರತದ ಚಾರಿತ್ರಿಕ ದಿಲ್ಲಿ ಮುತ್ತಿಗೆ ದೇಶದ ಅಂಬಾನೀಕರಣದ ವಿರುದ್ಧ ನಡೆಯುತ್ತಿರುವ ಸಂಘರ್ಷವೂ ಆಗಿದೆ.

 ಆದರೂ ಸತ್ಯ ಹಂತಕ-ಭಾರತ ವಿರೋಧಿ ಮೋದಿ ಪಡೆ ದಿನಬೆಳಗಾದರೆ ಭಾರತ ಹಿಂದೆಂದೂ ಇಲ್ಲದಷ್ಟು ಪ್ರಗತಿ ಸಾಧಿಸುತ್ತಿದೆ ಎಂದು ಪುಂಗಿ ಊದುತ್ತಲೇ ಇವೆ. ತುರ್ತುಸ್ಥಿತಿಯ ಕಾಲದಲ್ಲೂ ಇದ್ದ ಇಂತಹ ಪುಂಗಿದಾಸರ ಬಗ್ಗೆ ನಾಡಿನ ಪ್ರಖ್ಯಾತ ಲೇಖಕ ಚಂಪಾ ಅವರು: ‘‘ದಾರಿಮಧ್ಯೆ ಕೆಟ್ಟು ನಿಂತ ಲಾರಿಯೂ ಹೇಳುತ್ತಿದೆ.. ದೇಶವು ಪ್ರಗತಿಪಥದಲ್ಲಿದೆ’’ ಎಂದು ಲೇವಡಿ ಮಾಡಿದ್ದರು. ಮೋದಿಯವರ ಭಾರತದಲ್ಲಿ ಆರ್ಥಿಕತೆ ದುರ್ಭರವಾಗುತ್ತಾ, ಸಮಾಜವು ಬರ್ಬರಗೊಳ್ಳುತ್ತಿರುವುದನ್ನೂ ಸರಕಾರದ ಹಲವಾರು ಅಧ್ಯಯನ ಸಂಸ್ಥೆಗಳು, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಹಲವಾರು ಸ್ವಾಯತ್ತ ಮತ್ತು ಗೌರವಾನ್ವಿತ ಸಂಸ್ಥೆಗಳು ಇತ್ತೀಚಿನ ಕೆಲ ದಿನಗಳಲ್ಲಿ ಬಯಲುಗೊಳಿಸಿವೆ.
ಇವುಗಳ ವರದಿಯಲ್ಲಿ ಬರ್ಬರವಾಗುತ್ತಿರುವ ಭಾರತದ ಅಸಲೀ ಪರಿಸ್ಥಿತಿಯ ಚಿತ್ರಗಳು ಹೀಗೆ ಬಯಲುಗೊಂಡಿವೆ:

ಮಾನವ ಸ್ವಾತಂತ್ರ್ಯ ಸೂಚ್ಯಂಕ-17 ಸ್ಥಾನ ಕುಸಿತ:
ಅಮೆರಿಕ ಮೂಲದ ಜಾಗತಿಕ ಸ್ವಾಯತ್ತ ಚಿಂತಕರ ಚಾವಡಿಯಾದ ಕ್ಯಾಟೋ ಸಂಸ್ಥೆಯು ಪ್ರತಿವರ್ಷ ಜಗತ್ತಿನ ವಿವಿಧ ದೇಶಗಳಲ್ಲಿ ಜನರಿಗಿರುವ ಸ್ವಾತಂತ್ರದ ಬಗ್ಗೆ ಸ್ವತಂತ್ರವಾಗಿ ಹಾಗೂ ಸರಕಾರವು ಕೊಡಮಾಡುವ ಅಂಕಿಅಂಶಗಳನ್ನು ಆಧರಿಸಿದ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡುತ್ತದೆ. ಅದು, ಕಾನೂನಿನ ಆಡಳಿತ, ಸುರಕ್ಷತೆ ಮತ್ತು ಭದ್ರತೆ, ಧಾರ್ಮಿಕ ಹಾಗೂ ನಾಗರಿಕ ಸ್ವಾತಂತ್ರ, ಹಕ್ಕುಗಳು ಮತ್ತು ಅಧಿಕಾರಗಳು ಇನ್ನಿತ್ಯಾದಿ ಮಾನವರ ನಾಗರಿಕ ಸ್ವಾತಂತ್ರಕ್ಕೆ ಸಂಬಂಧಪಟ್ಟ 76 ಅಂಶಗಳನ್ನು ಪರಿಗಣಿಸಿ ಆಯಾ ದೇಶಗಳ ‘ಮಾನವ ಸ್ವಾತಂತ್ರ ಸೂಚ್ಯಂಕ’ಗಳನ್ನು ನಿಗದಿಪಡಿಸುತ್ತದೆ.

ಜಗತ್ತಿನ 162 ದೇಶಗಳ ಸ್ವಾತಂತ್ರ ಸೂಚ್ಯಂಕಗಳ ಬಗ್ಗೆ ತನ್ನ 2020ನೇ ಸಾಲಿನ ವರದಿಯನ್ನು ಇತ್ತೀಚೆಗೆ ಕ್ಯಾಟೋ ಬಿಡುಗಡೆ ಮಾಡಿದೆ. 162 ದೇಶಗಳಲ್ಲಿರುವ ಮಾನವ ಸ್ವಾತಂತ್ರ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ 111ಕ್ಕೆ ಇಳಿದಿದೆಯೆಂದು ಆ ವರದಿಯು ತಿಳಿಸುತ್ತದೆ. 2019ರಲ್ಲಿ ಭಾರತವು 94ನೇ ಸ್ಥಾನದಲ್ಲಿತ್ತು. ಹಾಗೆ ನೋಡಿದರೆ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ಭಾರತವು ಮಾನವ ಸ್ವಾತಂತ್ರ ಸೂಚ್ಯಂಕದಲ್ಲಿ 75ನೇ ಸ್ಥಾನದಲ್ಲಿತ್ತು. ಆದರೆ ಅಲ್ಲಿಂದಾಚೆಗೆ ಭಾರತದ ಪ್ರಧಾನಿ ನಿರ್ಭರವಾದಷ್ಟು ಭಾರತದ ಪರಿಸ್ಥಿತಿ ಬರ್ಬರವಾಗುತ್ತಲೇ ಸಾಗುತ್ತಾ ಈಗ 111ನೇ ಸ್ಥಾನಕ್ಕೆ ಕುಸಿದಿದೆ. ಅಧ್ಯಯನದ ಪ್ರಕಾರ ಒಂದು ದೇಶ ಸಾಪೇಕ್ಷವಾಗಿ ಸರಾಸರಿ ಸ್ವಾತಂತ್ರವನ್ನು ಪಡೆದಿದೆ ಎಂದು ಭಾವಿಸಬೇಕೆಂದರೂ, ಅದು ಪರಿಗಣಿಸುವ 76 ಅಂಶಗಳಲ್ಲಿ ಕನಿಷ್ಠ ಸರಾಸರಿ 6.5 ಅಂಶಗಳನ್ನು ಪಡೆಯಬೇಕು. ಆದರೆ ಮೋದಿ ಭಾರತ ಪಡೆದುಕೊಂಡಿರುವುದು ಕೇವಲ 6.3. ಪಕ್ಕದ ಭೂತಾನ್, ಶ್ರೀಲಂಕಾ ಹಾಗೂ ನೇಪಾಳಗಳು ಕೂಡ ನಮಗಿಂತ ಹತ್ತಿಪ್ಪಿತ್ತು ಸ್ಥಾನಗಳು ಮುಂದಿವೆ. ಹಾಗೆಯೇ, ಕೆನಡಾದ ಫ್ರೇಸರ್ ಅಧ್ಯಯನ ಸಂಸ್ಥೆಯು ಪ್ರಕಟಿಸುವ ಜಾಗತಿಕ ಆರ್ಥಿಕ ಸ್ವಾತಂತ್ರ ಸೂಚ್ಯಂಕಗಳ ಪಟ್ಟಿಯಲ್ಲೂ ಭಾರತದ ಸ್ಥಾನವು ಕಳೆದ ಎರಡು ವರ್ಷಗಳಲ್ಲಿ 26 ಸ್ಥಾನಗಳು ಕುಸಿತಗೊಂಡು 162 ದೇಶಗಳಲ್ಲಿ 105ನೇ ಸ್ಥಾನಕ್ಕೆ ತಲುಪಿದೆ..
ಆಸಕ್ತರು ವರದಿಯನ್ನು ಈ ವೆಬ್ ವಿಳಾಸದಲ್ಲಿ ಪಡೆಯಬಹುದು: https://www.cato.org/human-freedom-index-new

ಸಂತಸ ಸೂಚ್ಯಂಕ: ಪಾತಾಳ ತಲುಪಲು ಸ್ಪರ್ಧೆ
ಒಂದು ದೇಶದ ಅಭಿವೃದ್ಧಿಯನ್ನು ಆಯಾ ದೇಶಗಳ ಜನರು ಎಷ್ಟು ಆನಂದ ಮತ್ತು ಸಂತಸದಿಂದ ಇದ್ದಾರೆ ಎಂಬುದನ್ನು ಆಧರಿಸಿ ಅರ್ಥಮಾಡಿಕೊಳ್ಳಬೇಕೆಂಬ ತಿಳುವಳಿಕೆ 2012ರಿಂದ ಜಗತ್ತಿನಾದ್ಯಂತ ಹಬ್ಬಿದೆ. ಹೀಗಾಗಿ ವಿಶ್ವ ಸಂಸ್ಥೆಯು ದೇಶಗಳ ಅಭಿವೃದ್ಧಿಯನ್ನು ಅಳೆಯಲು 2012ರಿಂದ ಟ್ಟ್ಝ ಏಜ್ಞಿಛಿ ಐ್ಞಛ್ಡಿ ಸಂತಸದ ಸೂಚ್ಯಂಕ-ಎಂಬ ಹೊಸ ಮಾನದಂಡವನ್ನು ಅಳವಡಿಸುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿಗೆ ತನ್ನ ಇಚ್ಛೆಗೆ ತಕ್ಕಂತೆ ಬದುಕನ್ನು ಆಯ್ಕೆ ಮಾಡಿಕೊಳ್ಳಲು ಇರುವ ಸ್ವಾತಂತ್ರ, ಅದಕ್ಕೆ ಸರಕಾರ ಮತ್ತು ಸಮಾಜದಿಂದ ಸಿಗುವ ಬೆಂಬಲ.. ಇನ್ನಿತ್ಯಾದಿಗಳನ್ನು ಮಾನದಂಡಗಳನ್ನಾಗಿ ಬಳಸಿಕೊಳ್ಳಲಾಗುತ್ತದೆ. ಭಾರತವು ಮೋದಿಯಾಗುವ ಮುನ್ನ ಈ ಮಾನದಂಡದಲ್ಲಿ ಜಗತ್ತಿನ 122ನೇ ಸ್ಥಾನದಲ್ಲಿತ್ತು. ಆದರೆ ನಂತರದ ವರ್ಷಗಳಲ್ಲಿ ಒಂದೇ ಸಮನೆ ಕುಸಿತ ಕಂಡು ಈ ವರ್ಷ 156 ದೇಶಗಳಲ್ಲಿ 144ನೇ ಸ್ಥಾನವನ್ನು ತಲುಪಿದೆ ಹಾಗೂ ಪ್ರಥಮ ಬಾರಿಗೆ ಕೊನೆಯ ಹತ್ತು ದೇಶಗಳ ಗುಂಪಿಗೆ ಭಾರತವು ಸೇರಿಕೊಂಡಿದೆ. ಸಭ್ ಚಂಗಾ ಸಿ!
ಆಸಕ್ತರು ವರದಿಯನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://worldhappiness.report/ed/2020/

ಮಾಧ್ಯಮ ಸ್ವಾತಂತ್ರ ಸೂಚ್ಯಂಕ: ಸತತ ಕುಸಿತ

ಒಂದು ದೇಶವು ನಿಜಕ್ಕೂ ಸ್ವತಂತ್ರವಾಗಿದೆಯೇ ಎಂದು ಪರಿಗಣಿಸಲು ಆ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರವನ್ನು ಎಷ್ಟರ ಮಟ್ಟಿಗೆ ಕಾಪಾಡಲಾಗುತ್ತಿದೆ ಎಂಬ ಮಾನದಂಡವು ಅತಿ ಮುಖ್ಯ. ಅದರಲ್ಲೂ ಒಂದು ದೇಶದಲ್ಲಿ ಸಮಾಜದ ಮತ್ತು ಸರಕಾರದ ನೀತಿ ಮತ್ತು ಧೋರಣೆಗಳನ್ನು ಮುಕ್ತವಾಗಿ ಟೀಕಿಸುವ ಸ್ವಾತಂತ್ರದ ಮಾನದಂಡಗಳು ಅರ್ಥಾತ್ ಪತ್ರಿಕಾ ಸ್ವಾತಂತ್ರಗಳನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತಿದೆ ಎನ್ನುವುದೇ ಒಂದು ದೇಶವು ನಿಜಕ್ಕೂ ಪ್ರಜಾತಾಂತ್ರಿಕವಾಗಿದೆಯೇ ಎಂಬುದನ್ನು ತೀರ್ಮಾನಿಸುತ್ತದೆ. ಇದನ್ನು ಅಳೆಯಲು ಜಗತ್ತಿನ ಮಾಧ್ಯಮ ಲೋಕದ ಸ್ವತಂತ್ರ ಮಾಧ್ಯಮ ಸಂಸ್ಥೆಯಾದ ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ಎಂಬ ಸಂಸ್ಥೆಯು ಕ್ಟೃಛಿ ಊ್ಟಛಿಛಿಟಞ ಐ್ಞಛ್ಡಿ ಮಾಧ್ಯಮ ಸ್ವಾತಂತ್ರದ ಸೂಚ್ಯಂಕವನ್ನು ಬಳಸುತ್ತವೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತದಲ್ಲಿ ಮಾಧ್ಯಮ ಸ್ವಾತಂತ್ರ ಒಂದೇ ಸಮನೆ ಕುಸಿಯುತ್ತಿದೆ ಎಂಬುದನ್ನು ಅದರ ವಾರ್ಷಿಕ ವರದಿಗಳು ಸ್ಪಷ್ಟಪಡಿಸುತ್ತವೆ. ಉದಾಹರಣೆಗೆ ಜಗತ್ತಿನ 180 ದೇಶಗಳಲ್ಲಿ ಭಾರತವು 2014ರಲ್ಲಿ 132ನೇ ಸ್ಥಾನದಲ್ಲಿತ್ತು. ಆದರೆ 2018ರಲ್ಲಿ ಭಾರತದ ಸ್ಥಾನ 138ಕ್ಕೆ ಕುಸಿಯಿತು.
ಈಗ 2020ರಲ್ಲಿ ಭಾರತದ ಸ್ಥಾನ 142ಕ್ಕೆ ಕುಸಿದಿದೆ. ಸದಾ ಸಂಘರ್ಷದ ವಾತಾವರಣದಲ್ಲಿರುವ ಫೆಲೆಸ್ತೀನ್, ಇಸ್ರೇಲ್, ಶ್ರೀಲಂಕಾ ದೇಶಗಳೂ ಸಹ ಮಾಧ್ಯಮ ಸ್ವಾತಂತ್ರದ ಸೂಚ್ಯಂಕದಲ್ಲಿ ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ! ಆಸಕ್ತರು ಪೂರ್ತಿ ವರದಿಯನ್ನು ಈ ವಿಳಾಸದಲ್ಲಿ ಓದಬಹುದು: https://rsf.org/en/ranking

ಹಸಿವಿನ ಸೂಚ್ಯಂಕ: ದುರ್ಭರ, ಗಂಭೀರ
  ಈ ಬಾರಿ ಜಾಗತಿಕ ಹಸಿವಿನ ಸೂಚ್ಯಂಕದ ಅಧ್ಯಯನಕ್ಕಾಗಿ ಪರಿಶೀಲಿಸಲಾದ 107 ದೇಶಗಳಲ್ಲಿ ಭಾರತವು 94ನೇ ಸ್ಥಾನವನ್ನು ಪಡೆದಿದೆ. ಅಂದರೆ ಕೆಳಗಿನಿಂದ 13 ನೇ ಸ್ಥಾನ!
ಒಂದು ದೇಶದ ಹಸಿವಿನ ಸೂಚ್ಯಂಕವನ್ನು ನಿಗದಿ ಮಾಡಲು ಈ ಅಧ್ಯಯನವು ನಾಲ್ಕು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ:
1. ಒಟ್ಟಾರೆ ಅಪೌಷ್ಟಿಕತೆ: 2. ಮಕ್ಕಳಲ್ಲಿ ಎತ್ತರಕ್ಕೆ ತಕ್ಕನಾದ ತೂಕವಿಲ್ಲದಿರುವಿಕೆ(ಚೈಲ್ಡ್ ವೇಸ್ಟಿಂಗ್). 3. ಮಕ್ಕಳಲ್ಲಿ ವಯಸ್ಸಿಗೆ ತಕ್ಕ ಎತ್ತರವಿಲ್ಲದಿರುವಿಕೆ(ಚೈಲ್ಡ್ ಸ್ಟಂಟಿಂಗ್) 4. ಶಿಶು ಮರಣದ ಪ್ರಮಾಣ.
ಜಾಗತಿಕ ಹಸಿವಿನ ಸೂಚ್ಯಂಕ (Global Hunger Index) 2020 ರ ಅಧ್ಯಯನದ ಪ್ರಕಾರ ಭಾರತ 94ನೇ ಸ್ಥಾನದಲ್ಲಿದೆ. ಮಾತ್ರವಲ್ಲದೆ ಒಟ್ಟಾರೆಯಾಗಿ ಕೇವಲ 27.2 ಅಂಕಗಳನ್ನು ಪಡೆದು ಕೊಂಡಿ ರುವ ಭಾರತದ ಪರಿಸ್ಥಿತಿಯನ್ನು ಗಂಭೀರ ಎಂದು ವರದಿಯು ಘೋಷಿಸಿದೆ. ಹೋದವಾರ ಬಿಡುಗಡೆಯಾಗಿರುವ ಭಾರತ ಸರಕಾರದ National Family Helath Suvey (NFHS) -2019-20ರ ವರದಿಯೂ ಸಹ ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ.

ಈ ಸರಕಾರಿ ವರದಿಯ ಪ್ರಕಾರವೇ ಗುಜರಾತನ್ನೂ ಒಳಗೊಂಡಂತೆ ಭಾರತದ ಹತ್ತು ದೊಡ್ಡರಾಜ್ಯಗಳಲ್ಲಿ ಚೈಲ್ಡ್ ಸ್ಟಂಟಿಂಗ್ ಹೆಚ್ಚಾಗಿದೆ. ಚೈಲ್ಡ್ ವೇಸ್ಟಿಂಗ್ ಪ್ರಮಾಣವೂ ಒಂದು ಯಾವ ಸುಧಾರಣೆಯನ್ನೂ ಕಾಣದೆ ಮೊದಲಿದ್ದಂತೇ ಇದೆ ಅಥವಾ ಇನ್ನೂ ಕುಸಿದಿದೆ. ಸಾಮಾನ್ಯವಾಗಿ ಅಪೌಷ್ಟಿಕತೆಗೆ ಆಹಾರದ ಕೊರತೆಯು ಪ್ರಧಾನ ಕಾರಣ ಹಾಗೂ ಅದರ ಜೊತೆಗೆ ಮೂಲಭೂತ ಸೌಕರ್ಯಗಳ ಲಭ್ಯತೆ ಮತ್ತು ಉತ್ತಮ ಪರಿಸರದ ಕೊರತೆಯೂ ಕಾರಣವಾಗಿವೆ. ಆದರೆ ಈ ಸರಕಾರಿ ವರದಿಯ ಪ್ರಕಾರವೇ ಗುಜರಾತನ್ನೂ ಒಳಗೊಂಡಂತೆ ಈ ದೊಡ್ಡ ರಾಜ್ಯಗಳಲ್ಲಿ ಶೇ. 67 ಜನರ ಮನೆಗಳಲ್ಲಿ ಕುಡಿಯುವ ನೀರಿನ ಸೌಕರ್ಯವಿಲ್ಲ. ಶೇ. 21ರಷ್ಟು ಮನೆಗಳಿಗೆ ಶೌಚಾಲಯವಿಲ್ಲ ಹಾಗೂ ಶೇ.40 ರಷ್ಟು ಮನೆಗಳಿಗಿನ್ನೂ ಗ್ಯಾಸ್ ಸಿಲಿಂಡರ್ ಸೌಕರ್ಯವಿಲ್ಲ. ಈ ರಾಜ್ಯಗಳ ಸ್ಲಂಗಳಲ್ಲಿನ ಶೇ. 21ರಷ್ಟು ಮನೆಗಳು ರೇಷನ್ ಕಾರ್ಡ್ ಸೌಲಭ್ಯ ಹೊಂದಿಲ್ಲ. ಆಸಕ್ತರು ವರದಿಯನ್ನು ಈ ವಿಳಾಸದಲ್ಲಿ ಪಡೆಯಬಹುದು: http://rchiips.org/nfhs/NFHS-4Report.shtml

ಅಷ್ಟು ಮಾತ್ರವಲ್ಲ. ಕೋವಿಡ್ ಕಾಲಘಟ್ಟದಲ್ಲಿ ಭಾರತ ವಿಶ್ವಕ್ಕೇ ಗುರುವಾಗಿ ನಿರ್ವಹಿಸಿದೆ ಎಂದು ಮೋದಿ ಸರಕಾರ ಕೊಚ್ಚಿಕೊಳ್ಳುತ್ತದೆ. ಆದರೆ ವಾಸ್ತವ ಅದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆಯೆಂದು ಹಲವಾರು ಸ್ವಾಯತ್ತ ಸಂಸ್ಥೆಗಳ ವರದಿಗಳು ಸ್ಪಷ್ಟಪಡಿಸಿವೆ. ಉದಾಹರಣೆಗೆ ‘ರೈಟ್ ಟು ಫುಡ್ ಕ್ಯಾಂಪೇನ್’ ಸಂಸ್ಥೆಯು ಕೋವಿಡ್ ಅವಧಿಯಲ್ಲಿ ದೇಶದ ಹಲವಾರು ಭಾಗಗಳಲ್ಲಿ ಭೇಟಿ ಮಾಡಿ, ಸಂತ್ರಸ್ತರ ಅನುಭವಗಳನ್ನಾಧರಿಸಿದ ‘ಹಂಗರ್ ವಾಚ್’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಈ ಅವಧಿಯಲ್ಲಿ ಶೇ. 27ರಷ್ಟು ಮಂದಿ ಪ್ರತಿರಾತ್ರಿ ಹೊಟ್ಟೆಗಿಲ್ಲದೆ ಮಲಗಿದ್ದಾರೆ. ಪ್ರತಿ 20 ಮನೆಗಳಲ್ಲಿ ಒಂದು ಮನೆಯಲ್ಲಿ ಒಲೆಯನ್ನೇ ಹಚ್ಚಿರಲಿಲ್ಲ. ಇದು ಹೆಚ್ಚಾಗಿ ಕಂಡುಬಂದಿದ್ದೂ ಮೋದಿಯರ ಗುಜರಾತಿನಲ್ಲಿ ಎಂದು ಕೂಡಾ ಆ ವರದಿ ಸ್ಪಷ್ಟಪಡಿಸುತ್ತದೆ. ಇನ್ನಷ್ಟು ವಿವರಗಳನ್ನು ಆಸಕ್ತರು ಇಲ್ಲಿ ಪಡೆದುಕೊಳ್ಳಬಹುದು: https://thewire.in/rights/hunger-watch-survey-lockdown

ಭ್ರಷ್ಟಾಚಾರ ಸೂಚ್ಯಂಕ- ಮೋದಿ ಭಾರತ ಏಶ್ಯಕ್ಕೆ ನಂಬರ್ 1!

ಇವೆಲ್ಲಾ ಹಾಳಾಗಲಿ.. ಭ್ರಷ್ಟಾಚಾರವನ್ನು ಬುಡಮಟ್ಟ ಕೀಳುತ್ತೇವೆಂದು ಕಾಂಗ್ರೆಸನ್ನು ಕಿತ್ತುಹಾಕಿ ಅಧಿಕಾರಕ್ಕೆ ಬಂದ ಮೋದಿಯವರ ಬಿಜೆಪಿ ಸರಕಾರ ಅದನ್ನಾದರೂ ಕಡಿಮೆ ಮಾಡಿದೆಯೇ? ಜಾಗತಿಕವಾಗಿ ಸರಕಾರಗಳು ಮಾಡುವ ಭ್ರಷ್ಟಾಚಾರದ ರೀತಿನೀತಿಗಳನ್ನು ಅಧ್ಯಯನ ಮಾಡುವ ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್’ ಎನ್ನುವ ಸಂಸ್ಥೆಯ ಪ್ರಕಾರ ಮೋದಿಯವರ ಭಾರತ ಈಗ ಭ್ರಷ್ಟಾಚಾರದಲ್ಲಿ ಏಶ್ಯಕ್ಕೆ ನಂಬರ್ 1 ಆಗಿದೆಯಂತೆ. ಈ ಸಂಸ್ಥೆ ಅಧ್ಯಯನಕ್ಕಾಗಿ ಸಂಪರ್ಕಿಸಿದ ವ್ಯಕ್ತಿಗಳಲ್ಲಿ ಶೇ. 50ಕ್ಕೂ ಹೆಚ್ಚು ಜನರ ಬಳಿ ಅಧಿಕಾರಸ್ಥರು ಬಾಯಿಬಿಟ್ಟು ಕೇಳಿ ಲಂಚ ಪಡೆದುಕೊಂಡಿದ್ದರೆ ಶೇ.31ರಷ್ಟು ಜನರು ಸೂಕ್ತ ಸಂಪರ್ಕದ ಮೂಲಕ ಲಂಚ ಪಾವತಿಸಿದ್ದಾರೆ. ಅದರ 2020ರ ವರದಿಯ ಪ್ರಕಾರ ಭಾರತದಲ್ಲಿ ಸರಕಾರದ ನೀತಿಗಳನ್ನು ನೇರಾನೇರ ಕಾರ್ಪೊರೇಟುಗಳೇ ನಿಯಂತ್ರಿಸುವುದರಿಂದಾಗಿ ಮತ್ತು ರಾಜಕೀಯ ಪಕ್ಷಗಳ ಫಂಡಿಂಗ್ ನೀತಿಗಳು ಹೆಚ್ಚೆಚ್ಚು ಅಪಾರದರ್ಶಕವಾಗುತ್ತಿರುವುದರಿಂದ ಜಾಗತಿಕ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಈ ವರ್ಷ ಭಾರತವು ಎರಡು ಸ್ಥಾನಗಳಷ್ಟು (78 ರಿಂದ 80ಕ್ಕೆ) ಕೆಳಗಿಳಿದಿದೆ. ()

ಕಪ್ಪುಹಣ ಸೃಷ್ಟಿ- ಮೋದಿ ಸರಕಾರ ಏಶ್ಯಕ್ಕೆ ನಂ.3!

ಮೋದಿ ಸರಕಾರ ಕೊಚ್ಚಿಕೊಂಡ ಬಡಾಯಿಗಳಲ್ಲಿ ಮತ್ತೊಂದು ಪ್ರಮುಖ ಬಡಾಯಿ ಕಪ್ಪುಹಣದ ನಿಯಂತ್ರಣ ಹಾಗೂ ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುವುದು. ಆದರೆ ಮೋದಿ ಸರಕಾರ ತುಂಬು ಆರು ವರ್ಷ ಆಡಳಿತ ನಡೆಸಿದ ನಂತರ ಕಪ್ಪುಹಣ ಸೃಷ್ಟಿಯಲ್ಲಿ ಈಗ ಏಶ್ಯದಲ್ಲೇ ಮೂರನೇ ಸ್ಥಾನಕ್ಕೆ ಏರಿದೆ! ‘ಗ್ಲೋಬಲ್ ಫೈನಾನ್ಷಿಯಲ್ ಇಂಟೆಗ್ರಿಟಿ’- ಜಿಎಫ್‌ಐ- ಎಂಬ ಗೌರವಾನ್ವಿತ ಪರಿಣಿತ ಸಂಸ್ಥೆಯ ಪ್ರಕಾರ ಕೇವಲ ಅಂತರ್‌ರಾಷ್ಟ್ರೀಯ ವಾಣಿಜ್ಯ ವಹಿವಾಟುಗಳಲ್ಲಿ ಪ್ರತಿ ವರ್ಷ ಮೋದಿ ಸರಕಾರದಡಿಯಲ್ಲಿ ಸರಕಾರಕ್ಕೆ ತೆರಿಗೆ ಕಟ್ಟದೆ 83.5 ಬಿಲಿಯನ್ ಡಾಲರುಗಳಷ್ಟು ಅಂದರೆ 6.5 ಲಕ್ಷ ಕೋಟಿ ರೂಪಾಯಿಗಳು ಭಾರತದ ಗಡಿ ದಾಟಿ ಹೋಗುತ್ತಿವೆ. ಕೇವಲ ಒಂದು ಬಾಬತ್ತಿನಲ್ಲಿ ಇದು ಕಳ್ಳ ಹಣ ಸೃಷ್ಟಿಯಲ್ಲಿ ಭಾರತದ ಸ್ಥಾನವನ್ನು 135 ದೇಶಗಳಲ್ಲಿ 3ನೇ ಸ್ಥಾನಕ್ಕೆ ಏರಿಸಿದೆ..
ಆಸಕ್ತರು ಪೂರ್ತಿ ವರದಿಯನ್ನು ಇಲ್ಲಿ ಓದಬಹುದು: https://gfintegrity.org/report/trade-related-illicit-financial-flows-in-135-developing-countries-2008-2017

ಜಿಡಿಪಿ ಜಿಹಾದ್!- ಬಾಂಗ್ಲಾಕ್ಕಿಂತ ಹಿಂದೆ ಬಿದ್ದ ಮೋದಿ ಭಾರತ
International Monetary Fund- IMFನ ಇತ್ತೀಚಿನ ಅಧ್ಯಯನದ ಪ್ರಕಾರ, 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ : ಭಾರತದ ತಲಾವಾರು ಆದಾಯ- 1,574 ಡಾಲರುಗಳು (ಅಂದರೆ ಇಂದಿನ ರೂಪಾಯಿ ದರದಲ್ಲಿ 1,18,050ರೂ. ಗಳು)ಆಗ ಬಾಂಗ್ಲಾದೇಶದ ತಲಾವಾರು ಆದಾಯ-1,093 ಡಾಲರು (81,975ರೂ. )
2020ರಲ್ಲಿ ಮೋದಿಯವರ ಆರು ವರ್ಷಗಳ ರಾಜ್ಯಭಾರದ ನಂತರ:

ಭಾರತದ ತಲಾವಾರು ಆದಾಯ- 1,877 ಡಾಲರು (1,40,775 ರೂ.). ಬಾಂಗ್ಲಾ ದೇಶದ ತಲವಾರು ಆದಾಯ-1,888 ಡಾಲರು!! (1,41,400 ರೂ.) ಅರ್ಥಾತ್ 2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಭಾರತದ ತಲಾವಾರು ಆದಾಯ ಬಾಂಗ್ಲಾದೇಶಕ್ಕಿಂತ ಶೇ. 44ರಷ್ಟು ಜಾಸ್ತಿ ಇತ್ತು. ಆರು ವರ್ಷಗಳ ಅಚ್ಛೇ ದಿನಗಳ ನಂತರ:
ಬಡ ಬಾಂಗ್ಲಾದೇಶ ವಿಶ್ವಗುರು ಭಾರತವನ್ನೇ ಹಿಂದಿಕ್ಕಿ ಬಿಟ್ಟಿದೆ..
ಅಷ್ಟು ಮಾತ್ರವಲ್ಲ 2025 ವರೆಗಿನ IMFನ ಅಂದಾಜಿನ ಪ್ರಕಾರ: ಭಾರತವು ಹೀಗೆಯೇ ಮುಂದುವರಿದರೆ ಪ್ರತಿವರ್ಷವೂ ಬಾಂಗ್ಲಾದೇಶಕ್ಕಿಂತ ಹಿಂದುಳಿಯುತ್ತಾ ಹೋಗುತ್ತದೆ. ಹಾಗೂ 2025ರಲ್ಲಿ ಬಾಂಗ್ಲಾದೇಶದ ತಲಾವಾರು ಆದಾಯ ಭಾರತೀಯ ರೂಪಾಯಿಗಳಲ್ಲಿ 2,06,700 ತಲುಪುತ್ತದೆ ಹಾಗೂ ಬಾಂಗ್ಲಾದೇಶೀಯರು ಭಾರತೀಯರಿಗಿಂತ ತಲಾ 3,000 ರೂ. ಹೆಚ್ಚು ಶ್ರೀಮಂತರಾಗಿರುತ್ತಾರೆ.
ಆಸಕ್ತರು ಹೆಚ್ಚಿನ ವಿವರಗಳನ್ನು ಇಲ್ಲಿ ಪಡೆದುಕೊಳ್ಳಬಹುದು: https://www.livemint.com/news/india/after-2020-bangladesh-set-to-surpass-india-s-per-capita-gdp-in-2025-11602690794181.html>

ಮೋದಿ ಸರಕಾರ- ನಿರ್ಭರ ಸರ್ವಾಧಿಕಾರ- ವಿ-ಡೆಮ್ ವರದಿ
ಇದರ ಜೊತೆಗೆ ಸ್ವೀಡನ್‌ನ ಗೊಥೆನ್‌ಬರ್ಗ್ ವಿಶ್ವವಿದ್ಯಾನಿಲಯದೊಂದಿಗೆ ಐರೋಪ್ಯ ಒಕ್ಕೂಟ, ಅಮೆರಿಕ ಸರಕಾರ ಮತ್ತು ವಿಶ್ವಬ್ಯಾಂಕ್‌ಗಳೆಲ್ಲವೂ ಸೇರಿಕೊಂಡು ಜಗತ್ತಿನ ಪ್ರಜಾತಂತದ ಆರೋಗ್ಯದ ಏರಿಳಿವುಗಳನ್ನು ಐತಿಹಾಸಿಕವಾಗಿ ವೌಲ್ಯಮಾಪನ ಮಾಡುವ ಯೋಜನೆಯನ್ನು ಕೈಗೆತ್ತಿಕೊಂಡಿವೆ. ಇದಕ್ಕೆ Varieties Of Democracy Projecy (v-Dem Project)  ಎಂದು ಹೆಸರಿಡಲಾಗಿದೆ.

ಇದರಡಿಯಲ್ಲಿ ಜಗತ್ತಿನ 196 ದೇಶಗಳಲ್ಲಿ 1901ರಿಂದ ಪ್ರಜಾತಾಂತ್ರಿಕ ಸಂಸ್ಥೆಗಳು ಮತ್ತು ವೌಲ್ಯಗಳು ಯಾವ ರೀತಿ ಏರಿಳಿವುಗಳನ್ನು ಕಾಣುತ್ತಿವೆಯೆಂದು ಪ್ರತಿವರ್ಷ ದಾಖಲಿಸಲಾಗುತ್ತದೆ. ಇದಕ್ಕಾಗಿ ಉದಾರವಾದಿ ಪ್ರಜಾತಂತ್ರಕ್ಕೆ ಸಂಬಂಧಿಸಿದ ಐದು ಮಾನದಂಡಗಳನ್ನು ಇಟ್ಟುಕೊಳ್ಳಲಾಗಿದೆ. ಚುನಾವಣಾ ಪ್ರಜಾತಂತ್ರದ ಸೂಚ್ಯಂಕ, ಉದಾರವಾದಿ ವೌಲ್ಯಗಳ ಸೂಚ್ಯಂಕ, ಜನರ ಜೊತೆ ಸಮಾಲೋಚನಾ ಸೂಚ್ಯಂಕ, ಜನರ ಪಾಲುದಾರಿಕೆ ಸೂಚ್ಯಂಕ ಹಾಗೂ ಆದರ್ಶವಾದಿ ಸೂಚ್ಯಂಕ. ಸ್ಪಷ್ಟವಾಗಿ ಕಾಣುವಂತೆ ಇಲ್ಲಿ ಒಂದು ದೇಶವನ್ನು ಪ್ರಜಾತಾಂತ್ರಿಕ ದೇಶ ಎಂದು ಪರಿಗಣಿಸಲು ಕೇವಲ ಚುನಾವಣೆ ನಡೆಸುವುದನ್ನು ಮಾತ್ರ ಏಕೈಕ ಮಾನದಂಡವನ್ನಾಗಿ ಪರಿಗಣಿಸುವುದಿಲ್ಲ. ಈ v-Dem ವೌಲ್ಯಮಾಪನ ಮಾಡುತ್ತಿರುವ ಪರಿಣಿತರ ಪ್ರಕಾರ ಕಳೆದ ಐದು-ಹತ್ತು ವರ್ಷಗಳಿಂದ ಜಗತ್ತಿನಲ್ಲಿ ಪ್ರಜಾತಂತ್ರದ ವಿರುದ್ಧವಾಗಿ ಮೂರನೇ ಸರ್ವಾಧಿಕಾರಿ ಅಲೆಯು ಬೀಸುತ್ತಿದೆ. ಹೀಗಾಗಿಯೇ ಈ ಹಿಂದೆ ಪ್ರಜಾತಂತ್ರವಾಗಿದ್ದ 27 ರಾಷ್ಟ್ರಗಳಲ್ಲಿ ಬಲಪಂಥೀಯ ಮತ್ತು ಸರ್ವಾಧಿಕಾರಿ ಅಂಶಗಳು ಬಲವಾಗಿ ನೆಲೆಯೂರುತ್ತಿವೆ ಎಂಬ ಅಂಶವನ್ನು ಬಯಲುಪಡಿಸಿದ್ದಾರೆ. ಅದರ ಪ್ರಕಾರ ಟ್ರಂಪ್‌ನ ಅಮೆರಿಕವೂ ಒಳಗೊಂಡಂತೆ, ಬ್ರೆಝಿಲ್, ಹಂಗೇರಿ, ರಶ್ಯ, ಟರ್ಕಿ ಮತ್ತು ಏಶ್ಯದಲ್ಲಿ ಮೋದಿ ಸರಕಾರದಡಿಯಲ್ಲಿರುವ ಭಾರತದಲ್ಲಿ ಸರ್ವಾಧಿಕಾರಿ ಅಂಶಗಳು ತೀವ್ರವಾಗಿ ಹೆಚ್ಚಾಗುತ್ತಿವೆ ಎಂದು ಅವರು ಗುರುತಿಸುತ್ತಾರೆ! ಭಾರತವು ಚುನಾವಣಾ ಸೂಚ್ಯಂಕದಲ್ಲಿ 10ರಲ್ಲಿ 7ಕ್ಕಿಂತ ತುಸು ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದರೂ ಉಳಿದ ನಾಲ್ಕೂ ಸೂಚ್ಯಂಕಗಳಲ್ಲಿ 10ಕ್ಕೆ 2-3 ಅಂಕಗಳನ್ನು ಮಾತ್ರ ಪಡೆದುಕೊಂಡಿದೆ!
ನಿರ್ಭರ ಮೋದಿ-ಬರ್ಬರ ಭಾರತ!

(https://www.v-dem.net/en/publications/democracy-reports/)

ನರಮೇಧ- ಮೋದಿ ಹೈ ತೋ ಮುಮ್ಕಿನ್ ಹೈ!
ವಿಶ್ವಸಂಸ್ಥೆಯ ಪ್ರಕಾರ ಜಿನೋಸೈಡ್-ನರಮೇಧ ಎಂದರೆ : ‘‘ಒಂದು ರಾಷ್ಟ್ರೀಯ, ಜನಾಂಗೀಯ, ಧಾರ್ಮಿಕ ಅಥವಾ ವರ್ಣೀಯ ಗುಂಪನ್ನು, ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡುವ ಉದ್ದೇಶದಿಂದ ಈ ಕೆಳಗಿನ ಯಾವುದೇ ಕ್ರಮಗಳನ್ನು ಎಸಗುವುದನ್ನು ನರಮೇಧದ ಕ್ರಮ- ಜಿನೋಸೈಡಲ್- ಎಂದು ಪರಿಗಣಿಸಲಾಗುವುದು: ಒಂದು ನಿರ್ದಿಷ್ಟ ಗುಂಪಿನ ಸದಸ್ಯರನ್ನು ಕೊಲ್ಲುವುದು; ಆ ಗುಂಪಿನ ಸದಸ್ಯರಿಗೆ ಗಂಭೀರವಾದ ಮಾನಸಿಕ ಅಥವಾ ದೈಹಿಕ ಹಾನಿಗಳನ್ನು ಉಂಟುಮಾಡುವುದು; ಆ ನಿರ್ದಿಷ್ಟ ಗುಂಪಿನ ಭೌತಿಕ ಅಸ್ತಿತ್ವವು ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡಬೇಕೆಂಬ ಉದ್ದೇಶದಿಂದಲೇ ದುರ್ಭರ ಜೀವನಸ್ಥಿತಿಗತಿಗಳನ್ನು ಸೃಷ್ಟಿಸುವುದು; ಆ ನಿರ್ದಿಷ್ಟ ಗುಂಪಿನ ಸದಸ್ಯರ ಸಂತಾನ ವೃದ್ಧಿಯಾಗದಂತಹ ಕ್ರಮಗಳನ್ನು ಜಾರಿ ಮಾಡುವುದು ಅಥವಾ ಅ ಗುಂಪಿನ ಮಕ್ಕಳನ್ನು ಮತ್ತೊಂದು ಗುಂಪಿಗೆ ಹಸ್ತಾಂತರಿಸುವುದು.’’

ಆದರೆ ಇಂತಹ ಪರಿಸ್ಥಿತಿಯು ರಾತ್ರೋರಾತ್ರಿ ಸೃಷ್ಟಿಯಾಗುವುದಿಲ್ಲ ಮತ್ತು ಇಂತಹ ನರಮೇಧಗಳು ಆಯಾ ದೇಶಗಳ ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳ ಮೇಲೆ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಹಂತಕ ಪಡೆಗಳು ಬಹುಪಾಲು ಜನರ ಸಮ್ಮತಿಯೊಂದಿಗೆ ಹಾಗೂ ಪ್ರಭುತ್ವದ ಸಕ್ರಿಯ ಅಥವಾ ಪರೋಕ್ಷ ಭಾಗೀದಾರಿಕೆಯೊಂದಿಗೆ ನಡೆಸುತ್ತವೆೆ. ಪ್ರಪಂಚ ಮಟ್ಟದಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ‘ಜಿನೋಸೈಡ್ ವಾಚ್’ ಎಂಬ ಸಂಸ್ಥೆ ಜಿನೋಸೈಡ್ ಸಂದರ್ಭವನ್ನು ಮೂರು ವರ್ಗಗಳಾಗಿ ವಿಂಗಡಿಸಿವೆ.
 ಅದರಲ್ಲಿ ಅತ್ಯಂತ ಗಂಭೀರವಾದ ಘಟ್ಟ ಜಿನೋಸೈಡ್ ಎಮರ್ಜೆನಿ
್ಸ ಹಂತ. ಇದಕ್ಕೆ ಮುಂಚಿನ ಹಂತ ಜಿನೋಸೈಡ್ ವಾರ್ನಿಂಗ್ 
ಹಂತ. ಅದಕ್ಕೆ ಪೂರ್ವಭಾವಿಯಾದ ಹಂತ ಜಿನೋಸೈಡ್ ವಾಚ್ 
ಘಟ್ಟ. ಭಾರತದ ಕಾಶ್ಮೀರ ಹಾಗೂ ಅಸ್ಸಾಮಿನಲ್ಲಿ ಕಳೆದ ಒಂದೆರಡು ವರ�

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News