"ಕೋವಿಡ್‌ ಲಸಿಕೆ ಕುರಿತಾದ ಉತ್ಸಾಹದಲ್ಲಿ ಆರ್ಥಿಕ ಕುಸಿತ ಮತ್ತು ಲಡಾಖ್‌ ಸಮಸ್ಯೆ ಮರೆಯದಿರಿ"

Update: 2021-01-05 07:14 GMT

ಹೊಸದಿಲ್ಲಿ,ಜ.05: ಕೋವಿಡ್ ಲಸಿಕೆ ಬಳಕೆಗೆ ಅನುಮತಿ ದೊರೆತ ಅತ್ಯುತ್ಸಾಹದಲ್ಲಿ ದೇಶದ ʼಕುಸಿಯುತ್ತಿರುವʼ ಆರ್ಥಿಕತೆ ಹಾಗೂ ಲಡಾಖ್‍ನಲ್ಲಿ ಚೀನಾ ಕನಿಷ್ಠ 4,000 ಚದರ ಕಿ.ಮೀ ಭೂಭಾಗವನ್ನು ಕಬಳಿಸಿರುವ  ವಿಚಾರವನ್ನು ಜನರು ಮರೆಯಬಾರದು ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಕುರಿತು ಸ್ವಾಮಿ ಟ್ವೀಟ್ ಮಾಡಿದ್ದಾರೆ.

ಭಾರತದ ಔಷಧಿ ನಿಯಂತ್ರಕ ಸಂಸ್ಥೆ ಸೀರಮ್ ಇನ್‍ಸ್ಟಿಟ್ಯೂಟ್ ತಯಾರಿಸಿರುವ  ಆಕ್ಸ್‍ಫರ್ಡ್ ವಿವಿ-ಆಸ್ಟ್ರಾಝೆನಕಾ ಲಸಿಕೆ ಹಾಗೂ ಭಾರತ್ ಬಯೋಟೆಕ್‍ನ ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ ಅನುಮತಿ ದೊರೆತ ನಂತರ ಸುಬ್ರಮಣಿಯನ್‌ ಸ್ವಾಮಿ ಈ ಹೇಳಿಕೆ ನೀಡಿದ್ದಾರೆ.

ತಮ್ಮದೇ ಪಕ್ಷದ ಸರಕಾರದ ಕಟು ಟೀಕಾಕಾರರಾಗಿ ಹೊರಹೊಮ್ಮಿರುವ ಸ್ವಾಮಿ ಇತ್ತೀಚೆಗೆ ಸರಕಾರವನ್ನು ಹಲವು ವಿಚಾರಗಳಲ್ಲಿ ಟೀಕಿಸಿದ್ದಾರೆ. ಏರುತ್ತಿರುವ ಇಂಧನ ದರ, ನೀತಿ ಆಯೋಗ ಸಿಇಒ ಅಮಿತಾಭ್ ಕಾಂತ್ ಅವರ `ಟೂ ಮಚ್ ಡೆಮಾಕ್ರೆಸಿ' ಹೇಳಿಕೆ  ಹಾಗೂ ಲಡಾಖ್ ಕುರಿತ ಹೇಳಿಕೆಗಳಲ್ಲಿ ಚೀನಾ ಹೆಸರು ಉಲ್ಲೇಖಿಸದೇ ಇದ್ದ ಪ್ರಧಾನಿ ಮೋದಿಯ ವಿರುದ್ಧವೂ ಸ್ವಾಮಿ ಇತ್ತೀಚೆಗೆ ಕಿಡಿ ಕಾರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News