ತಾಜ್‌ ಮಹಲ್‌ ಆವರಣದಲ್ಲಿ ಕೇಸರಿ ಧ್ವಜ ಹಾರಿಸಿದ ಹಿಂದೂ ಜಾಗರಣ ಮಂಚ್‌ ಸದಸ್ಯರ ಬಂಧನ

Update: 2021-01-05 09:41 GMT

ಆಗ್ರಾ,ಜ.05: ವಿಶ್ವ ವಿಖ್ಯಾತ ಸ್ಮಾರಕ ತಾಜ್‌ ಮಹಲ್‌ ನ ಆವರಣದಲ್ಲಿ ಹಿಂದೂ ಜಾಗರಣ ಮಂಚ್‌ ಸದಸ್ಯರು ಕೇಸರಿ ಧ್ವಜ ಹಾರಿಸಿದ ಘಟನೆ ನಡೆದಿದ್ದು, ಈ ಕುರಿತಾದಂತೆ ಪೊಲೀಸರು ಒಟ್ಟು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು timesofindia.com  ವರದಿ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಜ್‌ ಮಹಲ್‌ ಆವರಣದಲ್ಲಿ ಧ್ವಜ ಹಾರಿಸುವ ವೀಡಿಯೋವೊಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದೂ ಜಾಗರಣ ಮಂಚ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗಸಂಸ್ಥೆಯಾಗಿದೆ. ಆರೋಪಿಗಳನ್ನು ಹಿಂದೂ ಜಾಗರಣ ಮಂಚ್‌ ಜಿಲ್ಲಾಧ್ಯಕ್ಷ ಗೌರವ್‌ ತಲ್ವಾರ್‌, ರಿಷಿ ಲವಾನಿಯಾ, ಸೋನು ಭಗೇಲ್‌ ಹಾಗೂ ವಿಶೇಷ್‌ ಕುಮಾರ್‌ ಎಂದು ಗುರುತಿಸಲಾಗಿದೆ.

ಈ ಕುರಿತು ಮಾತನಾಡಿದ ಕೇಂದ್ರ ಭದ್ರತಾ ದಳದ ಮುಖ್ಯಸ್ಥ ರಾಹುಲ್‌ ಯಾದವ್‌, "ನಾಲ್ವರು ಆರೋಪಿಗಳು ಯೂಟ್ಯೂಬ್‌ ನಲ್ಲಿ ತಮ್ಮ ವೀಡಿಯೋ ಹೆಚ್ಚು ವೀಕ್ಷಣೆಯಾಗಲಿ ಎಂಬ ನಿಟ್ಟಿನಲ್ಲಿ ಈ ಕೃತ್ಯವೆಸಗಿದ್ದಾರೆ. ಇಲ್ಲಿ ಲೋಹ ಪತ್ತೆಹಚ್ಚುವ ವ್ಯವಸ್ಥೆಯಿದೆ, ಆದರೆ ಸಣ್ಣ ಬಟ್ಟೆ ತುಂಡುಗಳು ಇದರಲ್ಲಿ ದಾಖಲಾಗುವುದಿಲ್ಲ. ಇನ್ನು ಸೆಲ್ಫೀ ಸ್ಟಿಕ್‌ ಗಳನ್ನು ಆವರಣಕ್ಕೆ ತರಲು ಅನುಮತಿಯಿದೆ. ಅವರು ಸೆಲ್ಫೀ ಸ್ಟಿಕ್‌ ಬಳಸಿ ಧ್ವಜಾರೋಹಣ ನಡೆಸಿದ್ದಾರೆ" ಎಂದು ಹೇಳಿದ್ದಾಗಿ timesofindia.com ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News