ಲಸಿಕೆ ಬಗ್ಗೆ ಅಪಪ್ರಚಾರಕ್ಕೆ ಪ್ರತಿಯಾಗಿ ಲಸಿಕೆ ಹಾಕಿಸಿಕೊಳ್ಳಲು ಸದಸ್ಯರಿಗೆ ಐಎಂಎ ವಿನಂತಿ

Update: 2021-01-11 18:52 GMT

ಹೊಸದಿಲ್ಲಿ, ಜ.11: ಕೊರೋನ ಲಸಿಕೆ ಬಗ್ಗೆ ನಡೆಯುತ್ತಿರುವ ಅಪಪ್ರಚಾರಕ್ಕೆ ಉತ್ತರವಾಗಿ ಮತ್ತು ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಜನಸಾಮಾನ್ಯರಿಗೆ ತಿಳಿಹೇಳುವ ನಿಟ್ಟಿನಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಐಎಂಎ ತನ್ನ ಸದಸ್ಯರನ್ನು ವಿನಂತಿಸಿದೆ.

ಐಎಂಎಯ 1800 ಸ್ಥಳೀಯ ಘಟಕದ 3.5 ಲಕ್ಷ ಸದಸ್ಯರು ಲಸಿಕೆ ಪಡೆಯುವಂತೆ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ನೀಡಿರುವ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಲಾಗಿದೆ. ಈ ಮೂಲಕ ಕೊರೋನ ಲಸಿಕೆ ತಯಾರಿಸಲು ಶ್ರಮಿಸಿದ ಭಾರತೀಯ ವಿಜ್ಞಾನಿಗಳೊಂದಿಗೆ ಒಗ್ಗಟ್ಟು ಪ್ರದರ್ಶಿಸಬೇಕು ಮತ್ತು ಲಸಿಕೆ ನೀಡುವ ಅಭಿಯಾನಕ್ಕೆ ಸರ್ವ ವಿಧದ ಪ್ರೋತ್ಸಾಹ ನೀಡಬೇಕು ಎಂದು ಐಎಂಎ ವಿನಂತಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News