ಭಯೋತ್ಪಾದಕ ಸಂಘಟನೆ ಜೊತೆ ನಂಟು ಆರೋಪ: ಶಂಕಿತನ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ ಎನ್‍ಐಎ

Update: 2021-01-12 17:53 GMT

ಬೆಂಗಳೂರು, ಜ.12: ಭಯೋತ್ಪಾದಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಆರೋಪದಡಿ ಬಂಧಿತನಾಗಿದ್ದ ಶಂಕಿತನ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಹೊಸದಿಲ್ಲಿಯ ತಂಡ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದೆ ಎಂದು ವರದಿಯಾಗಿದೆ.

ಬೆಂಗಳೂರಿನ ಬಸವನಗುಡಿಯಲ್ಲಿ ವಾಸವಿದ್ದ ವೈದ್ಯ ಅಬ್ದುಲ್ ರೆಹ್ಮಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದು, ಹಿಂದಿನ ವಾರ್ಷಿಕ ಸಾಲಿನ ಆ.17ರಂದು ಎನ್‍ಐಎ ತನಿಖಾ ದಳ ಆರೋಪಿಯನ್ನು ಬಂಧಿಸಿತ್ತು.

ಬಾಂಗ್ಲಾ ಮೂಲದ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಕೊರೋಸನ್ ಪ್ರಾವಿನ್ಸ್ ಎಂಬ ಸಂಘಟನೆಗೆ ಅಬ್ದುಲ್ ರೆಹ್ಮಾನ್ ಸದಸ್ಯನಾಗಿದ್ದ ಎನ್ನುವ ಆರೋಪ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News